ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-02-2023)

Social Share

ನಿತ್ಯ ನೀತಿ : ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸು ತ್ತಿರೋ ಅದರ ಬಗ್ಗೆ ಎಚ್ಚರದಿಂದಿರಿ.

ಪಂಚಾಂಗ : ಬುಧವಾರ, 15-02-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ-ದಶಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವ್ಯಾಘಾತ /
ಕರಣ: ವಣಿಜ್

ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.25
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ಇಂದಿನ ರಾಶಿಭವಿಷ್ಯ :
ಮೇಷ
: ಆಹಾರ ಪದಾರ್ಥಗಳ ತಯಾರಕರಿಗೆ, ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ.
ವೃಷಭ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ವಾಗಬಹುದು. ಉದ್ಯೋಗದಲ್ಲಿ ನಷ್ಟ ಸಂಭವಿಸುವುದು. ಬಹಳ ಎಚ್ಚರಿಕೆಯಿಂದಿರಿ.
ಮಿಥುನ: ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯಕ್ಕೆ ವಿಘ್ನ ಸಂಭವಿಸದಂತೆ ನೋಡಿಕೊಳ್ಳಿ.

ಕಟಕ: ಹೆಚ್ಚು ಶ್ರಮ ವಹಿಸಿದರೆ ಆದಾಯ ಹೆಚ್ಚಾಗಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ.
ಸಿಂಹ: ಬಂಧುಗಳಲ್ಲಿ ಮಾಡಿದ ಲೇವಾದೇವಿ ವ್ಯವಹಾರ ಲಾಭದಾಯಕವಾಗಿರುವುದು.
ಕನ್ಯಾ: ಶುಭ ಸಮಾಚಾರ ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲ ಕಾರ್ಯಗಲ್ಲಿ ಯಶಸ್ಸು ಸಿಗಲಿದೆ. ಬಹಳ ಉತ್ತಮವಾದ ದಿನ.

ತುಲಾ: ನಿಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಬಗೆಹರಿಸಿಕೊಳ್ಳುವುದು ಒಳಿತು.
ವೃಶ್ಚಿಕ: ಸಾಲ ಅಥವಾ ಸಹಾಯದ ರೂಪದಲ್ಲಿ ಹಣ ದೊರೆ ಯಲಿದೆ. ಮನರಂಜನೆಗಾಗಿ ದೂರ ಪ್ರಯಾಣ ಸರಿಯಲ್ಲ.
ಧನುಸ್ಸು: ಜನಸಂಪರ್ಕದಲ್ಲಿರುವ ರಾಜಕಾರಣಿ ಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದು.

ಮಕರ: ಹೊರ ಪ್ರಪಂಚದಲ್ಲಿ ಬೆರೆಯುವುದನ್ನು ರೂಢಿಸಿ ಕೊಳ್ಳಿ. ರಾಜಕೀಯ ವಿಚಾರಗಳನ್ನು ಗುಪ್ತವಾಗಿರಿಸಿ.
ಕುಂಭ: ಜಟಿಲ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಸೂಕ್ತ ಮಾರ್ಗದರ್ಶಕರನ್ನು ಹುಡುಕುವಿರಿ.
ಮೀನ: ಸ್ನೇಹಿತರ ಸಹಾಯದಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article