ನಿತ್ಯ ನೀತಿ : ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ. ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ. ಅದನ್ನು ಧೈರ್ಯದಿಂದ ಎದುರಿಸು.
ಪಂಚಾಂಗ : ಸೋಮವಾರ, 15-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ : ಬೆ.06.07
ಸೂರ್ಯಾಸ್ತ : 06.41
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00
ಇಂದಿನ ರಾಶಿಭವಿಷ್ಯ
ಮೇಷ: ಸಹೋದರರು ಆರ್ಥಿಕ ಸಹಾಯ ಮಾಡು ವರು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ವೃಷಭ: ಆರೋಗ್ಯದ ವಿಷಯದಲ್ಲಿ ಜÁಗರೂಕ ರಾಗಿರುವುದು ಬಹಳ ಒಳ್ಳೆಯದು.
ಮಿಥುನ: ಯಾವುದೇ ಕೆಲಸ ಮಾಡಬೇಕಾದರೂ ಎಚ್ಚರಿಕೆಯಿಂದ ಮಾಡುವುದು ಸೂಕ್ತ.
ಕಟಕ: ಕುಟುಂಬದವ ರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಸಿಂಹ: ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆಯಾಗಬಹುದು.
ಕನ್ಯಾ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಮಾಡಬಹುದು.
ತುಲಾ: ನೆರೆಹೊರೆಯವರು ನಿಮ್ಮನ್ನು ಸಾಲ ಕೇಳಲು ಬರಬಹುದು. ಮಕ್ಕಳಿಂದ ಅನುಕೂಲವಾಗಲಿದೆ.
ವೃಶ್ಚಿಕ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ಧನುಸ್ಸು: ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.
ಮಕರ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ಕುಂಭ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ. ಸುಖ ಭೋಜನ ಮಾಡುವಿರಿ.
ಜಾಗರೂಕತೆಯಿಂದ ಹಣ ಖರ್ಚು ಮಾಡಿ.
ಮೀನ: ಬರುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಿ.ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಾಸುವಿರಿ.