ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ

Social Share

ಬೆಂಗಳೂರು, ನ.4- ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಕೆಲವೆಡೆ ಮಳೆಯಾಗುತ್ತಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ನಾಳೆಯವರೆಗೂ ಹೆಚ್ಚಿನ ಮಳೆ ಬರುವ ಸಂಭವವಿದೆ. ಭಾನುವಾರದ ನಂತರ ಮಳೆ ಪ್ರಮಾಣ ಇಳಿಕೆಯಾದರೂ ಅಲ್ಲಲ್ಲಿ ಚದುರಿದಂತೆ ಮಳೆ ಮುಂದುವರೆಯವ ಸಾಧ್ಯತೆಗಳು ಇವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದ್ರ ಜತೆಗೆ ಟ್ರ-ï ಕೂಡ ನಿರ್ಮಾಣವಾಗಿದ್ದು, ಇದರಿಂದ ಭಾಗಶಃ ಮೋಡ ಆವರಿಸಿರುತ್ತದೆ. ಕೆಲವೆಡೆ ಜಿಟಿ ಜಿಟಿ ಮಳೆಯೂ ಮುಂದುವರೆಯಲಿದೆ ಎಂದು ಹೇಳಿದರು.

ನಿನ್ನೆ ಮಧ್ಯಾಹ್ನ ಹಾಗೂ ಸಂಜೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದೆ. ಆದರೆ, ಭಾರಿ ಮಳೆಯಾದ ವರದಿಯಾಗಿಲ್ಲ. ರಾಮನಗರ, ಚಾಮರಾಜ ನಗರ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

BIG NEWS : ಚಂದ್ರಶೇಖರ್ ಸಾವಿನ ಹಿಂದೆ ಸಂಘಟನೆಯೊಂದರ ವ್ಯವಸ್ಥಿತ ಸಂಚು..!?

ಉಳಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಒಣಹವೆ ಮುಂದುವರೆದಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಮುಂದುವರೆದರೂ ಭಾರೀ ಮಳೆಯಾಗುವ ಮುನ್ಸೂಚನೆಗಳು ಇಲ್ಲ.

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಸುಳಿಗಾಳಿ ನಿರ್ಮಾಣವಾಗುತ್ತಿದ್ದು, ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಭಾನುವಾರದಿಂದ ಬಿಡುವು ಕೊಟ್ಟರೂ ನ.10 ಮತ್ತು 11ರಂದು ಮತ್ತೊಂದು ಸುತ್ತಿನ ಮಳೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಭೂಮಂಡಲಕ್ಕೆ ಕಾದಿದೆ ಅಪಾಯ, ಆತಂಕ ವ್ಯಕ್ತಪಡಿಸಿದ ಗುಟೆರೆಸ್

Articles You Might Like

Share This Article