ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (15-07-2022)

Social Share

ನಿತ್ಯ ನೀತಿ: ನೀವು ಕೋಪಿಸಿಕೊಳ್ಳುವ ಪ್ರತಿ ನಿಮಿಷವೂ 60 ಸೆಕೆಂಡುಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ.


ಶುಕ್ರವಾರ ಪಂಚಾಂಗ 15-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಪುನರ್ವಸು
*ಸೂರ್ಯೋದಯ: ಬೆ.06.01
*ಸೂರ್ಯಾಸ್ತ: 06.50
*ರಾಹುಕಾಲ; 10.30-12.00
*ಯಮಗಂಡ ಕಾಲ : 3.00-4.30
*ಗುಳಿಕ ಕಾಲ; 7.30-9.00

#ರಾಶಿ ಭವಿಷ್ಯ

ಮೇಷ: ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗ ರೂಕರಾಗಿರಬೇಕು. ಆಹಾರದ ಕಡೆ ಗಮನ ನೀಡಿ.
ವೃಷಭ: ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಮಿಥುನ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.

ಕಟಕ: ತಾಯಿ ಕಡೆಯ ಸಂಬಂಕರೊಂದಿಗೆ ಮಾತುಕತೆ ನಡೆಸುವಾಗ ಜಾಗರೂಕರಾಗಿರಬೇಕು

ಸಿಂಹ: ಕಚೇರಿ ಕೆಲಸ -ಕಾರ್ಯ ಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.

ಕನ್ಯಾ: ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದಿರಬೇಕು.

ತುಲಾ: ಮನೋಸ್ಥೈರ್ಯ ಅಧಿಕವಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ಬಹಳ ಎಚ್ಚರಿಕೆಯಿಂದ ಮಾತನಾಡುವುದು ಒಳಿತು.
ಧನುಸ್ಸು: ಧ್ಯಾನ ಮಾಡುವುದರಿಂದ ಮನಸ್ಸು ಉಲ್ಲಾಸದಿಂದಿರುತ್ತದೆ.

ಮಕರ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಸ್ವಂತ ವ್ಯವಹಾರ ಮಾಡಲು ಪ್ರಯತ್ನಿಸುವಿರಿ.
ಕುಂಭ: ಪತ್ನಿಯ ಕುಟುಂಬ ಸದಸ್ಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಮೀನ: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.

Articles You Might Like

Share This Article