ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (16-07-2022)

Social Share

ನಿತ್ಯ ನೀತಿ: ಯಶಸ್ಸು ಹಾಗೂ ಸಂತೋಷದ ರಹಸ್ಯವೆಂದರೆ ನಿಸ್ವಾರ್ಥವಾದ ಮನೋಭಾವ.

ಶನಿವಾರ ಪಂಚಾಂಗ 16-07-2022
ಶುಭಕೃತ್ ನಾಮ ಸಂವತ್ಸರ/ ದಕ್ಷಿಣಾಯನ/ ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ /ನಕ್ಷತ್ರ: ಧನಿಷ್ಠಾ / ಮಳೆ ನಕ್ಷತ್ರ: ಪುನರ್ವಸು
*ಸೂರ್ಯೋದಯ: ಬೆ.06.01
*ಸೂರ್ಯಾಸ್ತ: 06.50
*ರಾಹುಕಾಲ : 9.00-10.30
*ಯಮಗಂಡ ಕಾಲ ; 1.30-3.00
*ಗುಳಿಕ ಕಾಲ: 6.00-7.30

#ರಾಶಿ ಭವಿಷ್ಯ

ಮೇಷ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ವ್ಯವಹಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ.
ವೃಷಭ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ಮಿಥುನ: ಹಣ ಕಳೆದುಕೊಳ್ಳುವ ಸಂಭವವಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಕಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಶಾಶ್ವತ ಸಿಗಲಿದೆ.
ಸಿಂಹ: ತಾವು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ದೂರ ಪ್ರಯಾಣ. ಖರ್ಚು ಹೆಚ್ಚಾಗುವ ಸಂಭವ. ಮಾತನಾಡುವಾಗ ಎಚ್ಚರಿಕೆ ಇರಲಿ.

ತುಲಾ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಶ್ಚಿಕ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಧನುಸ್ಸು: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.

ಮಕರ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಕುಂಭ: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.
ಮೀನ: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.

Articles You Might Like

Share This Article