ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-01-2023)

Social Share

ನಿತ್ಯ ನೀತಿ :
ಕಷ್ಟ-ಸುಖ ನೂರು ಇರಲಿ, ಕಳೆದ ಸಮಯ ನೋವೇ ತಂದಿರಲಿ, ಮನಸ್ಸಿನ ನೋವುಗಳು ಎಲ್ಲಾ ಮರೆಯಾಗಲಿ, ದುಃಖದ ಸಮಯ ದೂರಾಗಲಿ, ಎಲ್ಲರ ಮನಸ್ಸಿನಲ್ಲಿ ದ್ವೇಷ ತೊಲಗಿ ಪ್ರೀತಿ ನೆಲೆಸಲಿ ಹೊಸ ವರ್ಷದ ಸಮಯ ಶುಭ ತರಲಿ.

ಪಂಚಾಂಗ ಭಾನುವಾರ 01-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಅಶ್ವಿನಿ / ಯೋಗ: ಶಿವ
ಕರಣ: ತೈತಿಲ
ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.04
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ಮಾಡುವ ಕೆಲಸಗಳಿಗೆ ಗೆಳೆಯರಿಂದ ಸಹಕಾರ ಸಿಗಲಿದೆ.
ವೃಷಭ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುವಿರಿ.
ಮಿಥುನ: ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ಕಟಕ: ಬಂಧುಗಳೊಂದಿಗೆ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಸಿಂಹ: ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಕನ್ಯಾ: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.

ತುಲಾ: ಸಾಮಾಜಿಕವಾಗಿ ಕಿರಿಕಿರಿ ಅನುಭವಿಸ ಬೇಕಾಗ ಬಹುದು. ಬಂಧು-ಮಿತ್ರರ ಭೇಟಿಯಾಗಲಿದೆ.
ವೃಶ್ಚಿಕ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಧನುಸ್ಸು: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.

ಮಕರ: ಉದ್ಯೋಗ ಬದಲಾವಣೆಗೆ ಅವಕಾಶ ಗಳಿವೆ. ನಿಮ್ಮದಲ್ಲದ ವಿಷಯಗಳಿಗೆ ತಲೆ ಹಾಕದಿರಿ.
ಕುಂಭ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಮೀನ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.

Articles You Might Like

Share This Article