ನಿತ್ಯ ನೀತಿ : ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.
ಪಂಚಾಂಗ ಬುಧವಾರ 01-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಮೃಗಶಿರಾ / ಯೋಗ: ಐಂದ್ರ / ಕರಣ: ಭವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.21
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00
ರಾಶಿ ಭವಿಷ್ಯ
ಮೇಷ: ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯುವಲ್ಲಿ ಯಶಸ್ವಿಯಾಗುವಿರಿ.
ವೃಷಭ: ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ. ನೂತನ ವ್ಯಕ್ತಿಯ ಪರಿಚಯವಾಗಲಿದೆ.
ಮಿಥುನ: ಹೂವಿನ ಬೆಳೆಗಾರರಿಗೆ ವಾತಾವರಣ ದಲ್ಲಿನ ಬದಲಾವಣೆಯಿಂದ ಸಣ್ಣಪುಟ್ಟ ತೊಂದರೆ ಗಳಾಗಬಹುದು.
ಕಟಕ: ತಂದೆಯ ಅನಾರೋಗ್ಯ ದಿಂದಾಗಿ ನೆಮ್ಮದಿ ಕೆಡಲಿದೆ.
ಸಿಂಹ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುವಿರಿ.
ಕನ್ಯಾ: ದೈನಂದಿನ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ಹರಿಸಿ.
ತುಲಾ: ಅನ್ಯರಿಗೆ ಸಹಾಯ ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದಿರಿ.
ವೃಶ್ಚಿಕ: ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತ ಕೆಲಸ ಕೈ ಸೇರಲಿದೆ.
ಧನುಸ್ಸು: ಸದಾಕಾಲ ದುಡಿಯುವ ನಿಮಗೆ ಇಂದು ಉತ್ತಮ ಫಲಗಳು ಸಿಗಲಿವೆ.
ಮಕರ: ವ್ಯವಹಾರದಲ್ಲಿ ಲಾಭ-ನಷ್ಟಗಳನ್ನು ಸರಿದೂಗಿಸಿಕೊಂಡು ಹೋಗುವುದು ಒಳಿತು.
ಕುಂಭ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಮೀನ: ಮಸಾಲೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,