ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-08-2022)

Social Share

ನಿತ್ಯ ನೀತಿ: ಸಂದರ್ಭಗಳು ಕಲಿಸಿದ ಪಾಠಗಳು ಬದುಕನ್ನು ಬದಲಿಸುತ್ತವೆ. ಸಂಬಂಧಗಳು ಕಲಿಸಿದ ಪಾಠಗಳು ಬದುಕುವುದನ್ನು ತಿಳಿಸುತ್ತವೆ.
ಸೋಮವಾರ ಪಂಚಾಂಗ 01-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪೂರ್ವಾಭಾದ್ರ /ಮಳೆ ನಕ್ಷತ್ರ: ಪುಷ್ಯ
ಸೂರ್ಯೋದಯ: ಬೆ.06.05
ಸೂರ್ಯಾಸ್ತ: 06.47
ರಾಹುಕಾಲ : 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ: ಮನೆಯಲ್ಲಿ ಜಗಳಗಳು ಉಂಟಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗಲಿದೆ.
ವೃಷಭ: ಮಕ್ಕಳು ಶಿಕ್ಷಣ ಹಾಗೂ ಸೃಜನಶೀಲ ಕ್ಷೇತ್ರ ಗಳಲ್ಲಿ ಆಸಕ್ತಿ ವಹಿಸುವರು.
ಮಿಥುನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.

ಕಟಕ: ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಸಿಂಹ: ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಮಾಡದಿರಿ.
ಕನ್ಯಾ: ಸಂಗಾತಿಯ ಬೇಡಿಕೆಗಳು ನಿಮಗೆ ಸ್ವಲ್ಪ ಒತ್ತಡ ಉಂಟುಮಾಡಬಹುದು.

ತುಲಾ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ವೃಶ್ಚಿಕ: ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡಬೇಡಿ
ಧನುಸ್ಸು: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ಮಕರ: ಸ್ವಲ್ಪ ಹಣ ಬರುವುದು. ಆದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ. ಮಿತವಾಗಿ ಬಳಸಿ.
ಕುಂಭ: ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
ಮೀನ: ಕಾನೂನು ತೊಡಕು ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ.

Articles You Might Like

Share This Article