ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-01-2023)

Social Share

ನಿತ್ಯ ನೀತಿ : ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.

ಪಂಚಾಂಗ ಸೋಮವಾರ 02-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಭರಣಿ / ಯೋಗ: ಸಿದ್ಧ / ಕರಣ: ವಣಿಜ್
ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.05
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಸಭೆ-ಸಮಾರಂಭಗಳಲ್ಲಿ ಮುಂದಾಳತ್ವ ವಹಿಸಿ ಕೀರ್ತಿ-ಗೌರವ ಸಂಪಾದಿಸುವಿರಿ.
ವೃಷಭ: ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವುದು.
ಮಿಥುನ: ಅಕ್ಕಪಕ್ಕದವರೊಂದಿಗೆ ಸಂಯಮದಿಂದ ನಡೆದುಕೊಳ್ಳಿ. ನಾನಾ ರೀತಿಯಲ್ಲಿ ಹಣ ಕೈ ಸೇರಲಿದೆ.

ಕಟಕ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದು ರಾದರೂ ಆದಾಯಕ್ಕೆ ತೊಂದರೆಯಿಲ್ಲ.
ಸಿಂಹ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಆದಾಯ ಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಲಾಭ.
ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ ಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.

ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಶಾಂತಿ, ಸಮಾಧಾನ ಅಗತ್ಯ.
ವೃಶ್ಚಿಕ: ನಿಮ್ಮ ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುವಿರಿ.
ಧನುಸ್ಸು: ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.

ಮಕರ: ವಿವಾದಗಳಿಗೆ ಆಸ್ಪದ ನೀಡದಿರಿ. ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾಗುತ್ತದೆ.
ಕುಂಭ: ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ದೃಷ್ಟಿದೋಷ ತೊಂದರೆ ಎದುರಾಗಲಿದೆ.
ಮೀನ: ಮನಸ್ಸು ಚಂಚಲವಾಗಲಿದೆ. ಆಕಸ್ಮಿಕ ಧನಲಾಭವಾಗಬಹುದು. ಶತ್ರುಗಳ ಕಾಟ ತಪ್ಪಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article