ನಿತ್ಯ ನೀತಿ : ಮುಳ್ಳಿನ ಮೇಲೆ ಆಪಾದನೆ ಹೇಗೆ ಮಾಡಲಿ, ನೋಡದೆ ಕಾಲಿಟ್ಟವನು ನಾನೆ. ಬೇರೆಯವರನ್ನು ಕೆಟ್ಟವರೆಂದು ಹೇಗೆ ಆಪಾದನೆ ಮಾಡಲಿ, ತಿಳಿಯದೆ ಅವರನ್ನು ನಂಬಿದ್ದು ನಾನೆ.
ಪಂಚಾಂಗ ಗುರುವಾರ 02-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಆರಿದ್ರಾ / ಯೋಗ: ವೈಧೃತಿ ಕರಣ: ಕೌಲವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.21
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿ ಭವಿಷ್ಯ
ಮೇಷ: ಹಿರಿಯ ಅಧಿಕಾರಿಗಳು, ಕುಟುಂಬ ದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ವೃಷಭ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ಮಿಥುನ: ಅಧಿಕಾರಿಗಳೊಂದಿಗಿನ ವೈಮನಸ್ಯ ದೂರ ಮಾಡಿಕೊಂಡರೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅನುಕೂಲವಾಗಿರುತ್ತದೆ.
ಕಟಕ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ಸಿಂಹ: ಕೆಲಸ-ಕಾರ್ಯಗಳು ಸಂಪೂರ್ಣವಾಗಿ ಕಾರ್ಯಗತ ಗೊಳ್ಳಬಹುದು ಮತ್ತು ಅವು ನಿಮಗೆ ಅನುಕೂಲಕರ ಫಲಿತಾಂಶ ತಂದು ಕೊಡಲಿವೆ.
ಕನ್ಯಾ: ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.
ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ಮಕರ: ಕಾರ್ಯಸಾಧನೆಗಾಗಿ ಪ್ರಯಾಣ ಮಾಡಬೇಕಾಗಬಹುದು. ಅಧಿಕ ಖರ್ಚು
ಕುಂಭ: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.
ಮೀನ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,