ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-10-2022)

Social Share

ನಿತ್ಯ ನೀತಿ: ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನಲ್ಲ.

ಪಂಚಾಂಗ ಭಾನುವಾರ 02-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು /ಆಶ್ವಯುಜ ಮಾಸ /ಶುಕ್ಲ ಪಕ್ಷ / ತಿಥಿ: ಸಪ್ತಮಿ /ನಕ್ಷತ್ರ: ಮೂಲಾ /ಮಳೆ ನಕ್ಷತ್ರ: ಹಸ್ತ

ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.09
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ: ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸುವಿರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ.
ವೃಷಭ: ಉದ್ಯೋಗ ಬದಲಾವಣೆಗೆ ಅಡೆತಡೆ ಉಂಟಾಗಲಿದೆ. ಅತೀ ಒತ್ತಡಕ್ಕೆ ಒಳಗಾಗದಿರಿ.
ಮಿಥುನ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು. ಹಂತ ಹಂತವಾಗಿ ಕೆಲವು ವಿವಾದಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕಟಕ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಸಿಂಹ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ಕನ್ಯಾ: ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.

ತುಲಾ: ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮನದಲ್ಲಿ ರುವ ದುಗುಡ ನಿವಾರಿಸಿಕೊಳ್ಳಲು ಯತ್ನಿಸುವಿರಿ.
ವೃಶ್ಚಿಕ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು, ಬಂಧುಗಳು ನೀಡುವ ಸಲಹೆ-ಸೂಚನೆಗಳಿಂದ ದೂರವಾಗಲಿವೆ.

ಧನುಸ್ಸು: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ.
ಮಕರ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಮೀನ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.

Articles You Might Like

Share This Article