ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-01-2023)

Social Share

ನಿತ್ಯ ನೀತಿ : ಹುಟ್ಟಿನಿಂದ ಯಾರೂ ಬುದ್ಧಿವಂತರಲ್ಲ. ಏಕೆಂದರೆ ಬುದ್ಧಿವಂತಿಕೆಯು ಒಬ್ಬರ ಪ್ರಯತ್ನದಿಂದ ಉಂಟಾಗುತ್ತದೆ.

ಪಂಚಾಂಗ ಮಂಗಳವಾರ 03-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ /ಶುಕ್ಲ ಪಕ್ಷ / ತಿಥಿ: ದ್ವಾದಶಿ /ನಕ್ಷತ್ರ: ಕೃತ್ತಿಕಾ /ಯೋಗ: ಸಾಧ್ಯ
ಕರಣ: ಭವ
ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.06
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ನೂತನ ವ್ಯವಹಾರ ಪ್ರಾರಂಭದ ಯೋಚನೆ ಯಲ್ಲಿರುವವರು ಅದರ ಸಾಧಕ-ಬಾಧಕಗಳ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸುವುದು ಉತ್ತಮ.
ವೃಷಭ: ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಯಾವುದೇ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ.
ಮಿಥುನ: ಸಹಾಯ ಸಿಗುವುದೆಂಬ ನಂಬಿಕೆಯಲ್ಲಿ ಮನೆಯವರು ತಮ್ಮ ಆಸೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು.

ಕಟಕ: ಸರ್ಕಾರಿ ನೌಕರಿಯಲ್ಲಿರುವವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಂಭವವಿದೆ.
ಸಿಂಹ: ಕೃಷಿ ಚಟುವಟಿಕೆಗಳಲ್ಲಿ ಸಮಸ್ಯೆ ಎದುರಾ ಗಬಹುದು. ಕುಟುಂಬದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಲಿವೆ.
ಕನ್ಯಾ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.

ತುಲಾ: ನಿಮ್ಮ ಎಲ್ಲ ಸಮಸ್ಯೆ ಗಳಿಗೂ ಹರಿಹಾರ ಸಿಗಲಿದೆ. ಮನೋಭಿಲಾಷೆ ವ್ಯಕ್ತಪಡಿಸಲು ಹಿಂಜರಿಯದಿರಿ.
ವೃಶ್ಚಿಕ: ಮೇಲಧಿಕಾರಿಗಳು ನಿಮ್ಮ ಪ್ರತಿಭೆ ಗುರುತಿಸಿ ಬಹಿರಂಗವಾಗಿ ಗೌರವಿಸುವರು.
ಧನುಸ್ಸು: ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ. ನೂತನ ವ್ಯಕ್ತಿಯ ಪರಿಚಯವಾಗಲಿದೆ.

ಮಕರ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಕುಂಭ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದು ಒಳ್ಳೆಯದಲ್ಲ.
ಮೀನ: ಕಾರ್ಯಕ್ರಮಗಳ ಒತ್ತಡ, ಧಾವಂತ ದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article