ನಿತ್ಯ ನೀತಿ : ದುಡ್ಡಿಲ್ಲದವ ಬಡವನಲ್ಲ, ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ.
ಪಂಚಾಂಗ ಶುಕ್ರವಾರ 03-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಪುನರ್ವಸು / ಯೋಗ: ಸೌಭಾಗ್ಯ /ಕರಣ: ಭವ
ಸೂರ್ಯೋದಯ : ಬೆ.06.35
ಸೂರ್ಯಾಸ್ತ : 06.29
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00
ರಾಶಿ ಭವಿಷ್ಯ
ಮೇಷ: ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ.
ವೃಷಭ: ಆಹಾರ ಪದಾರ್ಥಗಳ ತಯಾರಕರಿಗೆ, ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ.
ಮಿಥುನ: ದಾಯಾದಿಗಳ ಮಧ್ಯೆ ನೀವಂದು ಕೊಂಡಷ್ಟು ಪರಿಸ್ಥಿತಿ ಕೆಟ್ಟದಾಗಿ ಇರುವುದಿಲ್ಲ.
ಕಟಕ: ಮನೆಯಲ್ಲಿ ನಡೆಯ ಬೇಕಾದ ಮಂಗಳ ಕಾರ್ಯಕ್ಕೆ ವಿಘ್ನ ಸಂಭವಿಸದಂತೆ ನೋಡಿಕೊಳ್ಳಿ.
ಸಿಂಹ: ಬಹಳ ದಿನಗಳ ನಂತರ ಹಳೆಯ ಮಿತ್ರರೊಬ್ಬರ ಭೇಟಿ ಸಂತಸ ತರಲಿದೆ.
ಕನ್ಯಾ: ದೇವತಾ ಕಾರ್ಯ ಗಳಲ್ಲಿ ನಿರಾಸಕ್ತಿ. ಕುಲದೇವತೆ ನಿಂದನೆ ಒಳ್ಳೆಯದಲ್ಲ.
ತುಲಾ: ಶುಭ ಸಮಾಚಾರ ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲ ಕಾರ್ಯಗಲ್ಲಿ ಯಶಸ್ಸು ಸಿಗಲಿದೆ.
ವೃಶ್ಚಿಕ: ನಿಮ್ಮ ಅಹಂಕಾರದ ಕಾರಣದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ಧನುಸ್ಸು: ಬಂಧುಗಳಲ್ಲಿ ಮಾಡಿದ ಲೇವಾದೇವಿ ವ್ಯವಹಾರ ಲಾಭದಾಯಕವಾಗಿರುವುದು.
ಮಕರ: ವೃತ್ತಿಜೀವನದಲ್ಲಿ ಯಶಸ್ಸು ಸಾಸುವಿರಿ. ಸ್ವಂತ ವ್ಯವಹಾರ ಮಾಡಲು ಪ್ರಯತ್ನಿಸುವಿರಿ.
ಕುಂಭ: ಜನಸಂಪರ್ಕದಲ್ಲಿರುವ ರಾಜಕಾರಣಿ ಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದು.
ಮೀನ: ಕಷ್ಟದಲ್ಲಿರುವ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಒತ್ತಡಕ್ಕೆ ಒಳಗಾಗದಿರಿ.