ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2022)

Social Share

ನಿತ್ಯ ನೀತಿ: ಶಿಕ್ಷೆಗಳನ್ನೇನೋ ಬಹಳಷ್ಟು ಕೊಡುತ್ತಿದೆ ಬದುಕು. ಆದರೆ, ಅದ್ಯಾಕೋ ಅಪರಾಧವೇನೆಂದು ಮಾತ್ರ ತಿಳಿಸುತ್ತಿಲ್ಲ.

ಬುಧವಾರ ಪಂಚಾಂಗ 03-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಹಸ್ತ /ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ: ಬೆ.06.06
ಸೂರ್ಯಾಸ್ತ: 06.46
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ: ಅಣ್ಣ-ತಂಗಿಯರಲ್ಲಿ ಒಬ್ಬರು ನಿಮ್ಮಿಂದ ಹಣದ ಸಹಾಯ ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಷಭ: ಸ್ನೇಹಿತರಿಂದ ನಿರೀಕ್ಷಿತ ಸಹಕಾರ ಸಿಗುವುದಿಲ್ಲ. ಮಾತಿಗೆ ಮಾತು ಬೆಳೆಸಬೇಡಿ.
ಮಿಥುನ: ನಿಮ್ಮ ಅಹಂಕಾರದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ. ಸಾಲಗಾರರ ಒತ್ತಡ ಹೆಚ್ಚಾಗಲಿದೆ.

ಕಟಕ: ಹಲವಾರು ವಿಷಯ ಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಸಿಂಹ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ.
ಕನ್ಯಾ: ಪ್ರೇಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉತ್ತಮ ದಿನ.

ತುಲಾ: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ವೃಶ್ಚಿಕ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗಲಿದೆ.
ಧನುಸ್ಸು: ಮನೆಯ ಎಲ್ಲ ಸದಸ್ಯರೊಂದಿಗೆ ಸಂಯಮದಿಂದ ಕಾಲ ಕಳೆಯಲು ಪ್ರಯತ್ನಿಸುವಿರಿ.

ಮಕರ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಕುಂಭ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿ ಹಾಗೂ ಉಳಿತಾಯದತ್ತ ಗಮನ ಹರಿಸಿ.
ಮೀನ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಯಿದೆ

Articles You Might Like

Share This Article