ನಿತ್ಯ ನೀತಿ : ಜೇಬಿನಲ್ಲಿ ದುಡ್ಡಿಲ್ಲದವನು ಬಡವನಲ್ಲ. ಬದುಕಿಗೊಂದು ನಿಶ್ಚಿತ ಗುರಿ ಮತ್ತು ಸಾಧಿಸುವ ಛಲ ಇಲ್ಲದವನೇ ನಿಜವದ ಬಡವ.
ಪಂಚಾಂಗ ಶನಿವಾರ 04-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು / ಯೋಗ: ಪ್ರೀತಿ / ಕರಣ: ಗರಜೆ
ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.22
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಕಚೇರಿಯಲ್ಲಿ ಅನವಶ್ಯಕ ಮನಸ್ತಾಪ ವಾಗಲಿದೆ. ಮಕ್ಕಳಿಂದ ಮಾನಸಿಕ ವೇದನೆ.
ವೃಷಭ: ಕಾನೂನು ಬಾಹಿರ ಧನ ಸಂಪಾದನೆ ಮಾಡುವ ಸಾಧ್ಯತೆ ಇದೆ. ಅನಾರೋಗ್ಯ ಸಮಸ್ಯೆ ಎದುರಾಗಲಿದೆ.
ಮಿಥುನ: ಅಧಿಕ ಧನನಷ್ಟ ಉಂಟಾಗಲಿದೆ. ಸಾಲ ಮಾಡುವ ಆಲೋಚನೆ ಕೈಬಿಡಿ.
ಕಟಕ: ವಸ್ತ್ರಾಭರಣ ಖರೀದಿಗೆ ಹಣ ವ್ಯಯ ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು.
ಸಿಂಹ: ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ದೃಷ್ಟಿದೋಷ ತೊಂದರೆ ಎದುರಾಗಲಿದೆ.
ಕನ್ಯಾ: ಮನಸ್ಸು ಚಂಚಲವಾಗಲಿದೆ. ಆಕಸ್ಮಿಕ ಧನಲಾಭವಾಗಬಹುದು. ಶತ್ರುಗಳ ಕಾಟ ತಪ್ಪಲಿದೆ.
ತುಲಾ: ದಾಂಪತ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
ವೃಶ್ಚಿಕ: ಅಧಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.
ಧನುಸ್ಸು: ಮಕ್ಕಳ ನಡವಳಿಕೆಯಿಂದ ಬೇಸರವಾಗ ಲಿದೆ. ಅಧಿಕ ಖರ್ಚು ಮಾಡುವುದನ್ನು ನಿಲ್ಲಿಸಿ.
ಮಕರ: ಮನಸ್ಸಿನ ಚಂಚಲ ಸ್ವಭಾವದಿಂದ ಕಾರ್ಯದಲ್ಲಿ ವಿಫಲರಾಗುವ ಸನ್ನಿವೇಶಗಳಿವೆ.
ಕುಂಭ: ಸಂಕಷ್ಟ ಅನುಭವಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯಲಿದೆ.
ಮೀನ: ಭವಿಷ್ಯದ ಕುರಿತು ಯೋಜನೆ ರೂಪಿಸಲು ಇಂದು ಬಹಳ ಉತ್ತಮ ಸಮಯ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,