ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-10-2022)

Social Share

ನಿತ್ಯ ನೀತಿ: ಬಲವಂತವಾಗಿ ಯಾರನ್ನೂ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಲು ಶ್ರಮ ಪಡಬೇಡಿ. ಇಷ್ಟ ಇದ್ದವರು ಅದೆಷ್ಟೇ ಕಷ್ಟ, ನೋವು ಬಂದರೂ ಜತೆಗಿರುತ್ತಾರೆ. ಇಲ್ಲದವರು ಅವರ ಅನುಕೂಲಕ್ಕೆ ಸುಳ್ಳು ಹೇಳಿ ದೂರ ಮಾಡುತ್ತಾರೆ.

ಪಂಚಾಂಗ ಮಂಗಳವಾರ 04-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಹಸ್ತ

ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.08
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30

ರಾಶಿ ಭವಿಷ್ಯ
ಮೇಷ: ಕೇವಲ ಮನರಂಜನೆಗಾಗಿ ಅಧಿಕ ಹಣ ಖರ್ಚು ಮಾಡುವಿರಿ. ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.
ವೃಷಭ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ. ಹೆಚ್ಚಿನ ಲಾಭ ಗಳಿಸುವಿರಿ.
ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದರಿಂದ ವರಮಾನ ಹೆಚ್ಚಾಗಲಿದೆ.

ಕಟಕ: ಉದ್ಯೋಗ ಬದಲಿರುವ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದು ಒಳಿತು.
ಸಿಂಹ: ಕೆಲಸ-ಕಾರ್ಯಗಳಲ್ಲಿ ಅಧಿಕ ಹಣ ವ್ಯಯವಾದರೂ ಮುಂದೆ ಅನುಕೂಲವಾಗಲಿದೆ.
ಕನ್ಯಾ: ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ತುಲಾ: ಸರ್ಕಾರಿ ನೌಕರರು ಮೇಲಧಿಕಾರಿಗ ಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ.
ಪೋಷಕರಿಂದ ಪಿತ್ರಾರ್ಜಿತ ಆಸ್ತಿ ಸಿಗಲಿದೆ.
ವೃಶ್ಚಿಕ: ನಿಮ್ಮೊಂದಿಗೆ ಕೆಲಸ ಮಾಡುವವರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನುಸ್ಸು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಘಟನೆಯೊಂದು ನಡೆಯಲಿದೆ.

ಮಕರ: ಆರ್ಥಿಕ ತಾಪತ್ರಯಗಳು ಹೆಚ್ಚಾಗಲಿವೆ. ಮನೆದೇವರಿಗೆ ಹೋಗಲು ನಿರ್ಧರಿಸುವಿರಿ.
ಕುಂಭ: ದಿನಚರಿಯ ಬದಲಾ ವಣೆ ಬಗ್ಗೆ ಗಮನ ಹರಿಸಿ. ದೂರ ಪ್ರಯಾಣ ಮಾಡುವಿರಿ.
ಮೀನ: ಓದು ಅಥವಾ ಉದ್ಯೋಗ ಆಯ್ಕೆ ವಿಚಾರ ದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ.

Articles You Might Like

Share This Article