ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(04-12-2022)

Social Share

ನಿತ್ಯ ನೀತಿ : ಮನುಷ್ಯನಲ್ಲಿ ದಡ್ಡತನ ಇದ್ದರೂ ಪರವಾಗಿಲ್ಲ, ಸಣ್ಣತನ ಇರಬಾರದು. ಏಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ದಡ್ಡತನದಿಂದಲ್ಲ, ಸಣ್ಣತನದಿಂದ.

ಪಂಚಾಂಗ ಭಾನುವಾರ 04-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಅಶ್ವಿನಿ / ಮಳೆ ನಕ್ಷತ್ರ: ಜ್ಯೇಷ್ಠ

ಸೂರ್ಯೋದಯ : ಬೆ.06.28
ಸೂರ್ಯಾಸ್ತ : 05.52
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟ ದಿಂದಾಗಿ ಉನ್ನತ ಸ್ಥಾನಮಾನ ಪಡೆಯುವಿರಿ.
ವೃಷಭ: ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶಗಳು ಸಿಗಲಿವೆ.
ಮಿಥುನ: ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ ಮಾಡುವಿರಿ. ವಿವಿಧ ಮೂಲಗಳಿಂದ ಆದಾಯ ಬರಲಿದೆ.

ಕಟಕ: ಕಾರ್ಯಕ್ರಮಗಳ ಒತ್ತಡ, ಧಾವಂತ ದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಲಿದೆ.
ಸಿಂಹ: ದೂರ ಪ್ರಯಾಣ ಅಥವಾ ಮನೆಯಿಂದ ದೂರ ಉಳಿಯುವುದು ಒಳ್ಳೆಯದಲ್ಲ.
ಕನ್ಯಾ: ಸಂಶೋಧಕರಿಗೆ, ಕ್ರಿಯಾಶೀಲರಿಗೆ ಅತ್ಯಂತ ಪ್ರಶಸ್ತ ಕಾಲ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

ತುಲಾ: ವ್ಯವಹಾರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡದಿರುವುದು ಒಳಿತು.
ವೃಶ್ಚಿಕ: ಬುದ್ಧಿಶಕ್ತಿಯಿಂದ ಕಾರ್ಯತಂತ್ರ ರೂಪಿಸುವಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡಿ.
ಧನುಸ್ಸು: ಗೆಳೆಯರು, ಸಂಬಂಧಿಕರ ನಡುವೆ ವೈಮನಸ್ಸು ಉಂಟಾಗುವ ಸಾಧ್ಯತೆಗಳಿವೆ.

ಮಕರ: ಮೇಲಧಿಕಾರಿಗಳು ನಿಮ್ಮ ಪ್ರತಿಭೆ ಗುರುತಿಸಿ ಬಹಿರಂಗವಾಗಿ ಗೌರವಿಸುವರು.
ಕುಂಭ: ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅಲ್ಪ ಪ್ರಮಾಣದ ಲಾಭ ಸಿಗಲಿದೆ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.

DailyHoroscope, #Horoscope, #KannadaHoroscope, #TodayHoroscope,

ರಾಶಿಭವಿಷ್ಯ,

Articles You Might Like

Share This Article