ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-01-2023)

Social Share

ನಿತ್ಯ ನೀತಿ : ನಾವು ಜಗತ್ತನ್ನು ತಪ್ಪಾಗಿ ಓದುತ್ತೇವೆ. ಹಾಗಾಗಿ ಅದು ನಮ್ಮನ್ನು ಮೋಸಗೊಳಿಸುತ್ತದೆ.

ಪಂಚಾಂಗ ಗುರುವಾರ 05-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಮೃಗಶಿರಾ / ಯೋಗ: ಶುಕ್ಲ / ಕರಣ: ಗರಜೆ

ಸೂರ್ಯೋದಯ : ಬೆ.06.43
ಸೂರ್ಯಾಸ್ತ : 06.07
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ವೃಷಭ: ಅನಾರೋಗ್ಯದಿಂದ ಬಳಲುತ್ತಿದ್ದ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಮಿಥುನ: ಗುಡಿ ಕೈಗಾರಿಕೆಯವರಿಗೆ ಸಾಕಷ್ಟು ಸಾಲ ಸಿಗಲಿದೆ. ಆರಕ್ಷಕ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗುವುದು.

ಕಟಕ: ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆ ಗಮನ ಹರಿಸುವರು. ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕವಾಗಿರುತ್ತದೆ.
ಸಿಂಹ: ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನೋವು ನಿಮ್ಮಿಂದ ದೂರಾಗಲಿದೆ.
ಕನ್ಯಾ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.

ತುಲಾ: ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾಗುತ್ತದೆ.ನೀವು ಕಂಡ ಕನಸು ಈಡೇರಲಿದೆ.
ವೃಶ್ಚಿಕ: ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಸಿಗಲಿದೆ.
ಧನುಸ್ಸು: ಸಂಬಂಧಿಕರ ವಲಯದಲ್ಲಿ ಹಲವು ತಪ್ಪು ಅಭಿಪ್ರಾಯಗಳು ದೂರವಾಗಲಿವೆ.

ಮಕರ: ಎಲ್ಲ ಕೆಲಸ- ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.
ಕುಂಭ: ಉದ್ಯೋಗ ಸ್ಥಳದಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ.
ಮೀನ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article