ನಿತ್ಯ ನೀತಿ : ಕೋಪ ಇದ್ದವರಿಗೆ ಬೇರೆ ಶತ್ರುವೇ ಬೇಡ. ಜ್ಞಾನ ಉಳ್ಳವರಿಗೆ ಬೇರೆ ಸಂಪತ್ತು ಬೇಡ. ಕರುಣೆಯುಳ್ಳವರಿಗೆ ಮತ್ತಾವ ರಕ್ಷಣೆಯೂ ಬೇಡ.
ಪಂಚಾಂಗ ಭಾನುವಾರ 05-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಪುಷ್ಯ / ಯೋಗ: ಆಯುಷ್ಮಾನ್ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.22
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಿ. ಹಿತಶತ್ರುಗಳ ಕಾಟ ತಪ್ಪಲಿದೆ.
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ ಎದುರಾಗಬಹುದು.
ಮಿಥುನ: ಭವಿಷ್ಯದ ಕುರಿತು ಯೋಜನೆ ರೂಪಿಸಲು ಇಂದು ಬಹಳ ಉತ್ತಮ ಸಮಯ.
ಕಟಕ: ಅಕ್ಕಪಕ್ಕದವರೊಂದಿಗೆ ಸ್ನೇಹಯುತ ಜೀವನ ನಡೆಸುವಿರಿ. ದಿನನಿತ್ಯದ ಜೀವನ ಶೈಲಿ ಬದಲಾಗಲಿದೆ.
ಸಿಂಹ: ಅತಿಯಾದ ಒರಟುತನ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಯಾರನ್ನಾದರೂ ನಂಬಿ ಹಣ ಹೂಡುವ ಮುನ್ನ ಯೋಚಿಸಿ.
ಕನ್ಯಾ: ಕಣ್ಣಿನ ದೃಷ್ಟಿ ಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ತುಲಾ: ಯಾವುದೇ ವಿಷಯ ವನ್ನಾದರೂ ಮುಕ್ತವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಒಳಿತು.
ವೃಶ್ಚಿಕ: ವೈದ್ಯರ ಸಲಹೆಯಂತೆ ವ್ಯಾಯಾಮ, ಯೋಗಾ ಭ್ಯಾಸವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.
ಧನುಸ್ಸು: ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನ. ಕುಟುಂಬದಲ್ಲಿ ಶಾಂತಿ, ಸಮಾಧಾನ ಇರುತ್ತದೆ.
ಮಕರ: ಸಭೆ-ಸಮಾರಂಭಗಳಲ್ಲಿ ಮುಂದಾಳತ್ವ ವಹಿಸಿ ಕೀರ್ತಿ-ಗೌರವ ಸಂಪಾದಿಸುವಿರಿ.
ಕುಂಭ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಮೀನ: ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಅನುಕೂಲಕ್ಕಾಗಿ ಹೆಚ್ಚು ಶ್ರಮ ಪಡುವರು.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,