ನಿತ್ಯ ನೀತಿ : ಅವಮಾನ ಮಾಡುವುದು ಕೆಲವರ ಸ್ವಭಾವವಾಗಿರಬಹುದು. ಆದರೆ, ಒಬ್ಬರನ್ನು ಗೌರವಿಸುವುದು, ಗೌರವದಿಂದ ಕಾಣುವುದು ನಮ್ಮ ಸಂಸ್ಕಾರಕ್ಕೆ ಬಂದ ಗುಣ.
ಪಂಚಾಂಗ ಭಾನುವಾರ 05-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು /
ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಅತಿಗಂಡ / ಕರಣ:ಗರಜೆ
ಸೂರ್ಯೋದಯ : ಬೆ.06.34
ಸೂರ್ಯಾಸ್ತ : 06.29
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಮಾಡಿಕೊಳ್ಳುವಿರಿ.
ವೃಷಭ: ಯಾವುದೇ ಉದ್ವೇಗಕ್ಕೆ ಒಳಗಾಗದಿರುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಂಭವವಿದೆ.
ಮಿಥುನ: ಜನರನ್ನು ನೀಡುವ ನೋಡುವ ರೀತಿ ಬದಲಾದಾಗ ಜನರು ನಿಮಗೆ ಒಳ್ಳೆಯವರಂತೆ ಕಾಣುವರು.
ಕಟಕ: ಉದ್ಯೋಗಾ ಕಾಂಕ್ಷಿಗಳಿಗೆ ಸಂದರ್ಶನದ ಕರೆಗಳು ಬರಲಿವೆ.
ಸಿಂಹ: ದುಡುಕುತನ ಒಳ್ಳೆಯದಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ.
ಕನ್ಯಾ: ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವಿರಿ. ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸ್ಥಾಪಿಸುವಿರಿ.
ತುಲಾ: ಬದುಕಿನಲ್ಲಿ ಅತಿ ವಿಲಾಸಿತನ ಬೇಡ. ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ವೃಶ್ಚಿಕ: ದಿನಸಿ ವರ್ತಕರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಯವಾಗಲಿದೆ.
ಧನುಸ್ಸು: ಕಚೇರಿಯಲ್ಲಿ ನೀವು ಮಾಡುವ ಹೆಚ್ಚಿನ ದುಡಿಮೆ, ನಿಸ್ವಾರ್ಥ ಸೇವೆಯನ್ನು ಪರಿಗಣಿಸುವರು.
ಮಕರ: ಯಾವುದೇ ಹೊಸ ಜವಾಬ್ದಾರಿ ತೆಗೆದು ಕೊಳ್ಳುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿಯಿರಿ.
ಕುಂಭ: ಸಹೋದ್ಯೋಗಿಗಳು ಮತ್ತು ಮೇಲ್ವಿಚಾರಕ ರೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಿ.
ಮೀನ: ನಿಮ್ಮ ಕೆಲಸದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,