ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-09-2022)

Social Share

ನಿತ್ಯ ನೀತಿ: ಬಲಿಷ್ಠವಾದ ಎರಡು ತೋಳುಗಳು ಎಷ್ಟು ಜಗತ್ತನ್ನು ಗೆಲ್ಲಬಹುದೋ ಅದಕ್ಕಿಂತಲೂ ಹೆಚ್ಚನ್ನು ಮಾನವೀಯತೆಯಿಂದ ಕೂಡಿದ ನಮಸ್ಕಾರ ಮಾಡುವ ಎರಡು ಕೈಗಳು ಗೆಲ್ಲಬಹುದು.

ಪಂಚಾಂಗ ಸೋಮವಾರ 05-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ /ನಕ್ಷತ್ರ: ಮೂಲಾ / ಮಳೆ ನಕ್ಷತ್ರ: ಪುಬ್ಬಾ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.28
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ಉದ್ಯೋಗದಲ್ಲಿ ಸಮಸ್ಯೆ ಕಂಡುಬರಲಿದೆ. ಇತರ ರೊಂದಿಗಿನ ಜಗಳದಿಂದಾಗಿ ನೆಮ್ಮದಿ ಇರುವುದಿಲ್ಲ.
ವೃಷಭ: ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ. ಹಣದ ಸಮಸ್ಯೆ ಹೆಚ್ಚಾಗಿ ಕಾಡಲಿದೆ.
ಮಿಥುನ: ಭೂ ಸಂಬಂಧಿ ವ್ಯವಹಾರಗಳು ಲಾಭದಾಯಕವಾಗಿರಲಿವೆ.

ಕಟಕ: ಆಕಸ್ಮಿಕ ಧನಲಾಭವಾಗುವುದು. ಬಂಧು-ಮಿತ್ರರ ಸಹಾಯ ದೊರೆಯಲಿದೆ.
ಸಿಂಹ: ಅಪೇಕ್ಷಿತ ಜನರಿಂದ ಕಾರ್ಯಸಾಧನೆಯಾಗಲಿದೆ.
ಕನ್ಯಾ: ವ್ಯಾಪಾರದಲ್ಲಿ ನಷ್ಟ ಉಂಟಾದರೂ ಕೆಲವು ಶುಭ ಫಲಗಳನ್ನು ನಿರೀಕ್ಷಿಸಬಹುದು.

ತುಲಾ: ಬಂಧು-ಮಿತ್ರರ ಸಮಸ್ಯೆ ಮತ್ತು ಹಣಕಾಸಿನ ತೊಂದರೆ ಕಾಡಲಿದೆ.
ವೃಶ್ಚಿಕ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.
ಧನುಸ್ಸು: ಉದ್ಯೋಗದಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಿವೆ. ವ್ಯಾಪಾರಿಗಳಿಗೆ ಅಲ್ಪ ಲಾಭ.

ಮಕರ: ಉತ್ತಮ ದೈವಬಲವಿದ್ದು, ಎಲ್ಲ ರೀತಿಯ ಅನುಕೂಲಗಳು ದೊರೆಯಲಿವೆ.
ಕುಂಭ: ನೂತನ ವ್ಯವಹಾರಕ್ಕೆ ಕೈ ಹಾಕಿ ದುಡುಕದಿರಿ. ಆಲೋಚಿಸಿ ತೀರ್ಮಾನ ಕೈಗೊಳ್ಳುವುದು ಒಳಿತು.
ಮೀನ: ದೈನಂದಿನ ಚಟುವಟಿಕೆಗಳಲ್ಲಿ ಅಭಿವೃದ್ಧಿ ಸಿಗಲಿದೆ. ದೂರ ಪ್ರಯಾಣ ಮಾಡುವಿರಿ.

Articles You Might Like

Share This Article