ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-10-2022)

Social Share

ನಿತ್ಯ ನೀತಿ: ಬಟ್ಟೆಯನ್ನು ಅಳತೆ ಮಾಡಿ. ಆದರೆ ಬಟ್ಟೆಯನ್ನು ನೋಡಿ ಮನುಷ್ಯನನ್ನು ಅಳೆಯಬೇಡಿ. ಮನುಷ್ಯನಿಗೆ ಹಣವಿಲ್ಲದಿದ್ದರೂ ಅವನದ್ದೇ ಆದ ಸ್ವಾಭಿಮಾನ, ಗುಣ ಇರುತ್ತದೆ. ಸಂಪತ್ತಿನ ಬೆಲೆಯೇ ಬೇರೆ, ಸಂಸ್ಕಾರದ ಬೆಲೆಯೇ ಬೇರೆ…

ಪಂಚಾಂಗ ಬುಧವಾರ 05-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ /ನಕ್ಷತ್ರ: ಶ್ರವಣ /ಮಳೆ ನಕ್ಷತ್ರ: ಹಸ್ತ

ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.07
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಪದೇ ಪದೇ ಮಾನಸಿಕ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು.
ವೃಷಭ: ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು. ತಂದೆ ಕಡೆಯಿಂದ ಧನಾಗಮನವಾಗಲಿದೆ.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ನಿರಾಸಕ್ತಿ. ಸಹೋದ್ಯೋಗಿಗಳೇ ಶತ್ರುಗಳಾಗುವರು.

ಕಟಕ: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ.
ಸಿಂಹ: ಎಲ್ಲರೂ ನಿಮ್ಮ ಮಾತು ಕೇಳಬೇಕೆಂದು ಹಠ ಹಿಡಿಯಬೇಡಿ.
ಕನ್ಯಾ: ಸಹೋದ್ಯೋಗಿಗಳೇ ಶತ್ರುಗಳಾಗುವರು.

ತುಲಾ: ದಿಢೀರ್ ಪ್ರಯಾಣದಿಂದ ದೂರ ಪ್ರಯಾಣಕ್ಕೆ ಹೋಗುವ ಅವಕಾಶ ಕಳೆದುಕೊಳ್ಳದಿರಿ.
ವೃಶ್ಚಿಕ: ಕೆಲಸ-ಕಾರ್ಯಗಳಿಗೆ ಸಾಲ ಮಾಡುವ ಸನ್ನಿವೇಶ ಎದುರಾಗಬಹುದು.
ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.

ಮಕರ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿ.
ಕುಂಭ: ಅನವಶ್ಯಕ ವಿಚಾರಗಳ ಬಗ್ಗೆ ಚಿಂತಿಸಿ ಮಾನಸಿಕವಾಗಿ ಕುಗ್ಗದಿರಿ.
ಮೀನ: ಮಕ್ಕಳಿಂದ ಕಿರಿಕಿರಿ. ಯಾರೋ ತೆಗೆದುಕೊಂಡ ನಿರ್ಧಾರಕ್ಕೆ ವ್ಯಥೆ ಪಡುವಿರಿ.

Articles You Might Like

Share This Article