ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(06-03-2023)

Social Share

ನಿತ್ಯ ನೀತಿ : ಉತ್ಸಾಹವಿಲ್ಲದೆ ಯಾವ ಮಹತ್ತರವಾದ ಕೆಲಸವೂ ನಡೆಯುವುದಿಲ್ಲ.
ಪಂಚಾಂಗ ಸೋಮವಾರ 06-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಮಘಾ / ಯೋಗ: ಸುಕರ್ಮ / ಕರಣ: ವಿಷ್ಠಿ

ಸೂರ್ಯೋದಯ : ಬೆ.06.33
ಸೂರ್ಯಾಸ್ತ : 06.29
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರಿ. ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ವೃಷಭ: ವಿದ್ಯಾರ್ಥಿಗಳು ಓದಿನಲ್ಲಿ ವಿಶೇಷ ಪ್ರಗತಿ ಕಾಣುವರು. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ: ನಿಮ್ಮ ಮೇಲಿರುವ ಆರೋಪಗಳು ನಿರಾಧಾರವೆಂದು ಸಾಬೀತಾಗಲಿದೆ.

ಕಟಕ: ಕಚೇರಿಯಲ್ಲಿ ಯಾವುದೇ ಅಡಚಣೆ ಯಾಗದೆ ಎಲ್ಲವೂ ಸುಲಭವಾಗಿ ನೆರವೇರಲಿವೆ.
ಸಿಂಹ: ಉತ್ಸಾಹ, ಹುಮ್ಮಸ್ಸಿನಿಂದಾಗಿ ಹೊಸ ಅವಕಾಶ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ಕಣ್ಣಿನ ದೃಷ್ಟಿಯಲ್ಲಿ ಬದ ಲಾವಣೆಯಾಗುವುದರಿಂದ ವೈದ್ಯರನ್ನು ಸಂಪರ್ಕಿಸಿ.

ತುಲಾ: ವಿದ್ಯಾರ್ಥಿಗಳಿಗೆ ಮಿತ್ರ ವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು.
ವೃಶ್ಚಿಕ: ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಸ್ನೇಹಿತರೊಂದಿಗೆ ಪ್ರವಾಸ ಮಾಡುವಿರಿ.
ಧನುಸ್ಸು: ಹಣ ಅಥವಾ ಗೌರವ ಎರಡರಲ್ಲಿ ಒಂದನ್ನು ಸಂಪಾದಿಸುವಿರಿ. ಭಿನ್ನಾಭಿಪ್ರಾಯ ದೂರವಾಗಲಿದೆ.

ಮಕರ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬರುವುದು ಒಳಿತು.
ಕುಂಭ: ವಾಹನ ಖರೀದಿಸುವ ಯೋಚನೆಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಮೀನ: ಕೆಲಸ-ಕಾರ್ಯಗಳಿಗೆ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article