ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-01-2023)

Social Share

ನಿತ್ಯ ನೀತಿ : ಇತರರು ನಿಮ್ಮನ್ನು ಅರ್ಥ ಮಾಡಿಕೊಂಡಿಲ್ಲವೆಂದು ಕೊರಗುತ್ತಿರಬೇಡಿ. ಗುಡ್ಡದ ತುದಿಯಲ್ಲಿ ನಿಂತವರಿಗೆ ಮಾತ್ರ ಮತ್ತೊಂದು ಗುಡ್ಡದ ಎತ್ತರ ಗೊತ್ತಾಗೋದು.

ಪಂಚಾಂಗ ಶನಿವಾರ 07-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪುನರ್ವಸು ಯೋಗ: ಐಂದ್ರ
ಕರಣ: ಬಾಲವ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.08
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಕಠಿಣ ಪರಿಶ್ರಮದಿಂದ ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣುವಿರಿ. ಉದ್ಯೋಗದಲ್ಲಿರುವ ಒತ್ತಡ ನಿವಾರಿಸಿಕೊಳ್ಳುವುದು ಕಷ್ಟವಾಗುತ್ತದೆ.
ವೃಷಭ: ಲೇವಾದೇವಿ ವ್ಯವಹಾರ ನಡೆಸುವುದು ಸರಿಯಲ್ಲ. ಅನವಶ್ಯಕ ಗೊಂದಲ ಮೈಮೇಲೆ ಎಳೆದುಕೊಳ್ಳದಿರಿ.
ಮಿಥುನ: ಸಾಲಬಾಧೆಯಿರುವ ಪರಿಸ್ಥಿತಿಯಲ್ಲಿ ಸಹೋದರರು ಸಹಕರಿಸುವರು.

ಕಟಕ: ವ್ಯಾಪಾರ ನಿಮಿತ್ತ ಪ್ರಯಾಣ ಮಾಡುವುದರಿಂದ ಹೊಸಬರ ಪರಿಚಯವಾಗಲಿದೆ.
ಸಿಂಹ: ಭೂ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ನಿರೀಕ್ಷಿಸಿದಷ್ಟು ಲಭಿಸದಿದ್ದರೂ ಹಣಕ್ಕೆ ತೊಂದರೆಯಾಗದು.
ಕನ್ಯಾ: ಬಂಧುಗಳು ನಿಮ್ಮ ಮೇಲೆ ಹೊಂದಿದ್ದ ಅಪನಂಬಿಕೆಗಳು ದೂರಾಗಲಿವೆ.

ತುಲಾ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಬೆಳ್ಳಿ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ಕೌಟುಂಬಿಕ ವಿಷಯಗಳಲ್ಲಿ ಬಹಳ ಖುಷಿ ಸಿಗುವುದು. ಜೀವನ ಶೈಲಿ ಬದಲಾಗಲಿದೆ.
ಧನುಸ್ಸು: ನೂತನ ಮಿತ್ರರ ಸಮಾಗಮವಾಗಲಿದೆ. ಧರ್ಮಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ ಸಿಗಲಿದೆ.

ಮಕರ: ಕೆಲಸ ಬದಲಿಸುವ ಯೋಚನೆ ಮಾಡುವವರಿಗೆ ಇದು ಸಕಾಲ.
ಕುಂಭ: ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಅನಗತ್ಯ ಮಾತುಗಳಿಗೆ ಕಿವಿಗೊಡದಿರಿ.
ಮೀನ: ಹಿತಶತ್ರುಗಳ ಕಾಟ ತಪ್ಪಲಿದೆ. ವ್ಯಾಪಾರ ದಲ್ಲಿ ಹೊಸದಾಗಿ ಹಣ ಹೂಡಿಕೆ ಮಾಡುವಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article