ನಿತ್ಯ ನೀತಿ : ಒಡಲೊಳಗೆ ನೂರು ನೋವುಗಳಿದ್ದರೇನು? ಮೊಗವು ಜಗವ ಬೆಳಗುವ ರವಿಯಂತೆ ಹೊಳೆಯುತಿರಬೇಕು.
ಪಂಚಾಂಗ ಮಂಗಳವಾರ 07-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಪೂರ್ವಾ / ಯೋಗ: ಧೃತಿ / ಕರಣ: ಬಾಲವ
ಸೂರ್ಯೋದಯ : ಬೆ.06.32
ಸೂರ್ಯಾಸ್ತ : 06.29
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿ ಭವಿಷ್ಯ
ಮೇಷ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ವೃಷಭ: ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಸಹಿ ಮಾಡುವುದು ಒಳಿತು.
ಮಿಥುನ: ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳಿದ್ದರೂ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಅಗತ್ಯವಿರುತ್ತದೆ.
ಕಟಕ: ಆಸ್ತಿಗೆ ಸಂಬಂಧಿಸಿದಂತೆ ಸಹೋದರರಲ್ಲಿ ಭಿನ್ನಾಭಿ ಪ್ರಾಯ ಉಂಟಾಗಬಹುದು.
ಸಿಂಹ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.
ಕನ್ಯಾ: ಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ಹೆಚ್ಚಾಗುವುದು.
ತುಲಾ: ಮನಸ್ಸಿಗೆ ನೋವು ಕೊಡುವಂತಹ ಕೆಲವು ಘಟನೆಗಳು ನಡೆಯಲಿವೆ.
ವೃಶ್ಚಿಕ: ಮಡದಿ-ಮಕ್ಕಳು ಮತ್ತು ಕುಟುಂಬದವರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.
ಧನುಸ್ಸು: ನಿಮ್ಮ ಅಹಂಕಾರದ ಕಾರಣದಿಂದಾಗಿ ಹಣಕಾಸು ನಷ್ಟ ಅನುಭವಿಸುವಿರಿ.
ಮಕರ: ಬಹಳ ದಿನಗಳ ನಂತರ ಹಳೆಯ ಮಿತ್ರರೊಬ್ಬರ ಭೇಟಿ ಸಂತಸ ತರಲಿದೆ.
ಕುಂಭ: ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಬಹಳ ಉತ್ತಮ ದಿನ.
ಮೀನ: ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದು.