ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-11-2022)

Social Share

ನಿತ್ಯ ನೀತಿ: ಯಾರು ನನಗಿಂತ ಮುಂದಿದ್ದಾರೆ, ಯಾರು ನಮಗಿಂತ ಹಿಂದಿದ್ದಾರೆ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ. ಯಾರು ನಮ್ಮ ಜತೆಗಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಂಡರೆ ಸಾಕು.

ಪಂಚಾಂಗ ಸೋಮವಾರ 07-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಅಶ್ವಿನಿ / ಮಳೆ ನಕ್ಷತ್ರ: ಸ್ವಾತಿ
ಸೂರ್ಯೋದಯ: ಬೆ.06.15
ಸೂರ್ಯಾಸ್ತ: 05.51
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸುವಿರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ.
ವೃಷಭ: ನೀತಿ-ನಿಯಮವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸುವುದು ಸರಿಯಲ್ಲ.
ಮಿಥುನ: ಮಕ್ಕಳು ಅವಿಧೇಯತೆಯಿಂದ ನಡೆದು ಕೊಳ್ಳುವುದರಿಂದ ಮನಸ್ಸಿಗೆ ನೋವುಂಟಾಗಲಿದೆ.

ಕಟಕ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.
ಸಿಂಹ: ದಾಂಪತ್ಯ ಜೀವನ ದಲ್ಲಿ ಮಧುರ ಬಾಂಧವ್ಯ ವೃದ್ಧಿಯಾಗಲಿದೆ.
ಕನ್ಯಾ: ಆರ್ಥಿಕ ತಾಪತ್ರಯ ಗಳ ಬಗ್ಗೆ ಬೇರೆಯವರೊಂದಿಗೆ ಹೇಳಿಕೊಳ್ಳಲಾಗದು.

ತುಲಾ: ಸ್ತ್ರೀಯರಿಂದ ಅಪ ವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ.
ವೃಶ್ಚಿಕ: ಕುಟುಂಬದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಧನುಸ್ಸು: ವಿವಾದಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಮಕರ: ನಿಮ್ಮ ಅತಿಯಾದ ಮಾತಿನಿಂದ ಮನೆ ಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.
ಕುಂಭ: ನಿಮ್ಮಿಂದ ಕೆಟ್ಟ ಕೆಲಸ ಮಾಡಿಸುವ ಪ್ರಯತ್ನಕ್ಕೆ ನಿಮ್ಮ ಸ್ನೇಹಿತರೇ ಯತ್ನ ನಡೆಸುವರು.
ಮೀನ: ಕಲಾವಿದರಿಗೆ ಒಳ್ಳೆಯ ದಿನ.

Articles You Might Like

Share This Article