ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-12-2022)

Social Share

ನಿತ್ಯ ನೀತಿ : ಎಲ್ಲ ಪಾಠವನ್ನು ಪುಸ್ತಕವೇ ಕಲಿಸುವುದಿಲ್ಲ. ಕೆಲವು ಪಾಠವನ್ನು ಜೀವನ ಹಾಗೂ ಸಂಬಂಧಗಳು ಕಲಿಸುತ್ತವೆ.

ಪಂಚಾಂಗ ಬುಧವಾರ 07-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಕೃತ್ತಿಕಾ / ಮಳೆ ನಕ್ಷತ್ರ: ಜ್ಯೇಷ್ಠ

ಸೂರ್ಯೋದಯ : ಬೆ.06.29
ಸೂರ್ಯಾಸ್ತ : 05.53
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗುವುದು. ಸ್ವಯಂ ಉದ್ಯೋಗಸ್ಥರಿಗೆ ಮತ್ತೊಬ್ಬರ ಸಹಾಯ ಅನಿವಾರ್ಯವಾಗಲಿದೆ.
ವೃಷಭ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಮುನ್ನ ಹಿರಿಯರೊಂದಿಗೆ ಚರ್ಚಿಸಿ.
ಮಿಥುನ: ಅತೀ ನಂಬಿಕೆ ಇಟ್ಟಿರುವ ಅಥವಾ ನಿಮ್ಮವರಿಂದಲೇ ತೊಂದರೆಗಳಾಗಲಿವೆ.

ಕಟಕ: ಸತ್ಕಾರ್ಯಗಳಿಂದ ಮನೆಯಲ್ಲಿ ಸಡಗರ – ಸಂಭ್ರಮದ ವಾತಾವರಣವಿರಲಿದೆ.
ಸಿಂಹ: ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡುವಿರಿ.
ಕನ್ಯಾ: ಶತ್ರುಬಾಧೆ ದೂರ ವಾಗಲಿವೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು.

ತುಲಾ: ಕೆಲಸದ ಸ್ಥಳದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.
ವೃಶ್ಚಿಕ: ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಸಿಗಲಿದೆ.
ಧನುಸ್ಸು: ಕಚೇರಿಯಲ್ಲಿ ಯಾವುದೇ ಅಡಚಣೆ ಬಾರದೆ ಎಲ್ಲವೂ ಸುಲಭವಾಗಿ ನೆರವೇರಲಿವೆ.

ಮಕರ: ಎಲ್ಲ ಕೆಲಸ-ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.
ಕುಂಭ: ತಂತ್ರಜ್ಞರು ಮತ್ತು ಕುಶಲ ಕರ್ಮಿಗಳ ಬೇಡಿಕೆಗಳು ಹೆಚ್ಚಾಗಲಿವೆ. ದೂರ ಪ್ರಯಾಣ ಬೇಡ.
ಮೀನ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article