ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-08-2022)

Social Share

ನಿತ್ಯ ನೀತಿ: ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ.

ಪಂಚಾಂಗ ಸೋಮವಾರ 08-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ: ಬೆ.06.06
ಸೂರ್ಯಾಸ್ತ: 06.44
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ವೈದ್ಯಕೀಯ ವೆಚ್ಚಗಳು ವಿಪರೀತವಾಗಲಿವೆ. ಇಲ್ಲಸಲ್ಲದ ಆರೋಪಗಳು ನಿಮ್ಮ ಮೇಲೆ ಬರಲಿವೆ.
ವೃಷಭ: ಕೆಲಸದಲ್ಲಿ ಯಶಸ್ಸು ಸಾಧಿಸಲು ನೆರೆಹೊರೆಯವರು ಸಹಾಯ ಮಾಡುವರು
ಮಿಥುನ: ಅತಿಥಿಗಳ ಆಗಮನದಿಂದಾಗಿ ಖರ್ಚು-ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗಲಿವೆ.

ಕಟಕ: ಹೊಸ ವ್ಯವಹಾರ ಆರಂಭಿಸುವುದನ್ನು ಆದಷ್ಟು ಮುಂದೂಡುವುದು ಒಳಿತು.
ಸಿಂಹ: ನಿಮ್ಮ ಬಗ್ಗೆ ಸಂಬಂಧಿಕರಲ್ಲಿ ಅಸೂಯೆ ಹುಟ್ಟುತ್ತದೆ. ಅವರಿಂದ ದುಃಖಕ್ಕೂ ಒಳಗಾಗಬಹುದು.
ಕನ್ಯಾ: ಮನಸ್ಸು ಚಂಚಲ ವಾಗಿರಲಿದೆ. ಅನ್ಯರ ಸಹಾಯ ಕೇಳುವಿರಿ. ಅಕಾಲ ಭೋಜನ ಮಾಡುವಿರಿ.

ತುಲಾ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ನಿಮ್ಮ ಮೇಲೆ ಕೋಪಗೊಳ್ಳಬಹುದು.
ವೃಶ್ಚಿಕ: ನೀವು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲು ಬಯಸುವಿರಿ.
ಧನುಸ್ಸು: ನಿಮ್ಮ ಮೇಲಿದ್ದ ತಪ್ಪು ಅಭಿಪ್ರಾಯಗಳು ದೂರವಾಗಲಿವೆ. ಹಣದ ಕೊರತೆ ಇರುವುದಿಲ್ಲ.

ಮಕರ: ಕುಶಲ ಕರ್ಮಿಗಳಿಗೆ ಪ್ರದರ್ಶನ, ಮಾರಾಟದಿಂದ ಅಕ ಆದಾಯ ಬರಲಿದೆ.
ಕುಂಭ: ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ.
ಮೀನ: ಪ್ರಯಾಣದಲ್ಲಿ ಅಪವಾದದ ಸನ್ನಿವೇಶಗಳು ಎದುರಾಗಬಹುದು. ಎಚ್ಚರಿಕೆಯಿಂದಿರಿ.

Articles You Might Like

Share This Article