ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(08-12-2022)

Social Share

ನಿತ್ಯ ನೀತಿ: ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ. ಸಂಸ್ಕಾರ ಕೆಡಲು ಬಿಡುವುದಿಲ್ಲ.

ಪಂಚಾಂಗ ಗುರುವಾರ 08-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು /ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ರೋಹಿಣಿ / ಮಳೆ ನಕ್ಷತ್ರ: ಜ್ಯೇಷ್ಠ

ಸೂರ್ಯೋದಯ : ಬೆ.06.30
ಸೂರ್ಯಾಸ್ತ : 05.53
ರಾಹುಕಾಲ : 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ: ಪೋಷಕರ ಸೇವೆಯನ್ನು ಆಸಕ್ತಿ ವಹಿಸಿ ಮಾಡುವುದರಿಂದ ತೊಂದರೆಗಳಿಂದ ಮುಕ್ತರಾಗುವಿರಿ.
ವೃಷಭ: ಉದ್ಯೋಗ ಬದಲಾವಣೆಗೆ ಅವಕಾಶ ಗಳಿವೆ. ನಿಮ್ಮದಲ್ಲದ ವಿಷಯ ಗಳಿಗೆ ತಲೆಹಾಕದಿರಿ.
ಮಿಥುನ: ಕುಟುಂಬದಲ್ಲಿ ತೊಂದರೆಗಳು ಎದುರಾಗ ಬಹುದು. ನಿಮ್ಮ ಹಾಗೂ ಸಂಗಾತಿ ಮಧ್ಯೆ ಗೊಂದಲಗಳು ಕಾಣಿಸಿಕೊಳ್ಳಬಹುದು.

ಕಟಕ: ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ನಿಮ್ಮ ನಡವಳಿಕೆ ತುಂಬಾ ಸೌಮ್ಯವಾಗಿರುತ್ತದೆ.
ಸಿಂಹ: ಮೇಲಧಿಕಾರಿಯೊಂದಿಗೆ ಅನಗತ್ಯ ಚರ್ಚೆಗಳು ನಡೆದು
ಕನ್ಯಾ: ವಿದ್ಯಾರ್ಥಿಗಳು ಹೊಸ ದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.

ತುಲಾ: ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ವೃಶ್ಚಿಕ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಧನುಸ್ಸು: ಬಡ್ತಿ ದೊರೆಯುವ ಯೋಗವಿದೆ. ಅದ ರೊಂದಿಗೆ ಸಮಸ್ಯೆಗಳೂ ಬರಲಿವೆ. ಎಚ್ಚರದಿಂದಿರಿ.

ಮಕರ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಲವಾರು ರೀತಿಯ ಚಿಂತೆ ಕಾಡಲಿವೆ.
ಕುಂಭ: ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆ ಯಲ್ಲಿರುವವರಿಗೆ ಅಂದು ಕೊಂಡಂತೆಯೇ ಆಗಲಿದೆ.
ಮೀನ: ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವವರು ವಿಶೇಷ ಲಾಭ ಪಡೆಯುವರು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article