ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-03-2023)

Social Share

ನಿತ್ಯ ನೀತಿ : ನಿನಗೇನೂ ಗೊತ್ತಿಲ್ಲ ಅಂತ ನಿನಗೆ ಗೊತ್ತಿರಬೇಕು. ಇದೇ ಜ್ಞಾನದ ನಿಜವಾದ ಅರ್ಥ.

ಪಂಚಾಂಗ ಗುರುವಾರ 09-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಹಸ್ತ / ಯೋಗ: ಗಂಡ / ಕರಣ: ತೈತಿಲ

ಸೂರ್ಯೋದಯ : ಬೆ.06.31
ಸೂರ್ಯಾಸ್ತ : 06.30
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ. ಉದ್ಯೋಗದಲ್ಲಿ ಲಾಭ ಸಿಗಲಿದೆ.
ವೃಷಭ: ಉತ್ತಮ ನಡತೆಯಿಂದಾಗಿ ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯಲಿದೆ.
ಮಿಥುನ: ಅನ್ಯಾಯ, ದಬ್ಬಾಳಿಕೆಗಳನ್ನು ವಿರೋಧಿಸುವಲ್ಲಿ ಯಶಸ್ವಿಯಾಗುವಿರಿ.

ಕಟಕ: ಖರ್ಚು- ವೆಚ್ಚ ಗಳನ್ನು ಸಮತೋಲ ರೀತಿಯಲ್ಲಿ ನಿಭಾಯಿಸಿ.
ಸಿಂಹ: ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸ್ವಭಾವ ರೂಢಿಸಿಕೊಳ್ಳಿ.
ಕನ್ಯಾ: ವಿವಾದಾತ್ಮಕ ವಿಷಯ ಗಳಿಂದ ದೂರವಿರಿ.

ತುಲಾ: ಹಣದ ವಿಷಯದಲ್ಲಿ ಜಾಗ್ರತೆ ಇರಲಿ. ಯಾರನ್ನೂ ಹೆಚ್ಚಾಗಿ ನಂಬದಿರುವುದು ಒಳಿತು.
ವೃಶ್ಚಿಕ: ಮಕ್ಕಳಿಂದ ನೋವು ಉಂಟಾಗಲಿದೆ. ಆದರ ಅವರ ಮೇಲೆ ಸಹನೆ ಇರಲಿ.
ಧನುಸ್ಸು: ಕೋಪ ಜಾಸ್ತಿಯಾದರೂ ಬೇಗ ಶಾಂತರಾಗುವಿರಿ. ಮಾತಿನಲ್ಲಿ ಸೋಲುವುದಿಲ್ಲ.

ಮಕರ: ಕುಟುಂಬದ ಮುಖ್ಯಸ್ಥರಿಂದ ಹಿತವಚನ ಕೇಳುವಿರಿ. ವಿಪರೀತ ಖರ್ಚಾಗಲಿದೆ.
ಕುಂಭ: ದಾಯಾದಿಗಳ ಕಲಹ. ಕೋಪ ಜಾಸ್ತಿ. ಆಸಲ್ಯ ಮನೋಭಾವವಿರುತ್ತದೆ. ತಾಳ್ಮೆಯಿಂದಿರಿ.
ಮೀನ: ಹಿರಿಯರ ಮಾರ್ಗದರ್ಶನ ಪಡೆಯಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

DailyHoroscope,

Horoscope,

KannadaHoroscope,

TodayHoroscope,

ರಾಶಿಭವಿಷ್ಯ,

Articles You Might Like

Share This Article