ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-11-2022)

Social Share

ನಿತ್ಯ ನೀತಿ: ಜೀವನದಲ್ಲಿ ಯಾವೊಂದು ಅವಕಾಶವನ್ನೂ ಬಿಡದೆ ಪ್ರಯತ್ನಿಸಬೇಕು. ಏಕೆಂದರೆ ಕೆಲವೊಂದು ಅವಕಾಶಗಳು ಜೀವಿತಾವಯಲ್ಲಿ ಒಮ್ಮೆ ಮಾತ್ರವೇ ಬರುತ್ತವೆ.

ಪಂಚಾಂಗ ಬುಧವಾರ 09-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಕೃತ್ತಿಕಾ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ: ಬೆ.06.16
ಸೂರ್ಯಾಸ್ತ: 05.51
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ವೃಷಭ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ಮಿಥುನ: ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಲಿದೆ. ಸಂಗಾತಿಯೊಂದಿಗೆ ವಿರಸ.

ಕಟಕ: ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆಗಳಿವೆ.
ಸಿಂಹ: ಅಕ್ಕಪಕ್ಕದವರ ಕಷ್ಟ-ಸುಖಗಳಿಗೆ ನೆರವಾಗುವುದರಿಂದ ಅವರ ಪ್ರಶಂಸೆಗೆ ಪಾತ್ರರಾಗುವಿರಿ.
ಕನ್ಯಾ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.


ತುಲಾ: ಸರ್ಕಾರಿ ನೌಕರರಿಗೆ, ಕೃಷಿಕರಿಗೆ ಅನುಕೂಲಕರವಾದ ದಿನ.
ವೃಶ್ಚಿಕ: ಹೊಸ ಉದ್ಯೋಗ ಸಿಗಲಿದೆ ಮತ್ತು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಧನುಸ್ಸು: ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು. ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ.

ಮಕರ: ವೃತ್ತಿಕ್ಷೇತ್ರದಲ್ಲಿ ನಿರಾಯಾಸವಾಗಿ ಗುರಿ ಸಾಧಿಸುವಿರಿ. ಸರ್ಕಾರಿ ಕೆಲಸ ಸಿಗಲಿದೆ.
ಕುಂಭ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಮೀನ: ಹೊಸ ಗೆಳೆತನ ಮಾಡುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ.

Articles You Might Like

Share This Article