ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2023)

Social Share

ನಿತ್ಯ ನೀತಿ : ಮನಸ್ಸಿನ ಸಂತೃಪ್ತಿಗೋಸ್ಕರವಾದರೂ ಒಳ್ಳೆಯ ಕೆಲಸ ಮಾಡುತ್ತಿರಬೇಕು. ಜನರು ಅದನ್ನು ಗುರುತಿಸುತ್ತಾರೋ ಇಲ್ಲವೋ ಎಂಬುದರ ಕಡೆಗೆ ಗಮನ ಕೊಡಬಾರದು. ಏಕೆಂದರೆ ಜನರು ದೇವರಲ್ಲೂ ಸಹ ದೋಷವನ್ನು ಹುಡುಕುತ್ತಾರೆ. ಇನ್ನು ಮನುಷ್ಯ ಯಾವ ಲೆಕ್ಕ.

ಪಂಚಾಂಗ ಮಂಗಳವಾರ 10-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಆಶ್ಲೇಷ / ಯೋಗ: ಪ್ರೀತಿ / ಕರಣ: ಭವ
ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.10
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಷಭ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ.
ಮಿಥುನ: ಆದಾಯ ಮೀರಿ ಖರ್ಚು ಹೆಚ್ಚಾಗಿ ಕಂಡುಬರಲಿವೆ. ಗೃಹಿಣಿಯರಿಗೆ ಸಂಭ್ರಮದ ದಿನ.

ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.
ಕನ್ಯಾ: ಸಮಾಜದಲ್ಲಿ ಗೌರವ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ತುಲಾ: ನೆರೆಹೊರೆಯವ ರೊಂದಿಗೆ ಸಮಾಧಾನದಿಂದ ಮಾತುಕತೆ ನಡೆಸಿದರೆ ಒಳಿತು.
ವೃಶ್ಚಿಕ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ಧನುಸ್ಸು: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.

ಮಕರ: ಅನಿರೀಕ್ಷಿತವಾಗಿ ಮಿತ್ರರ ಭೇಟಿಯಾಗಲಿದೆ. ಹಿತಶತ್ರುಗಳು ದೂರಾಗಿ ಮಾನಸಿಕ ನೆಮ್ಮದಿ ಸಿಗಲಿದೆ.
ಕುಂಭ: ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ದಿಂದಾಗಿ ಹೆಚ್ಚಿನ ಸ್ಥಾನಮಾನ ಸಿಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article