ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-02-2023)

Social Share

ನಿತ್ಯ ನೀತಿ : ಬದುಕುವ ಛಲ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

ಪಂಚಾಂಗ ಶುಕ್ರವಾರ 10-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಹಸ್ತ / ಯೋಗ: ಧೃತಿ /ಕರಣ: ಕೌಲವ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.24
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವುದು.
ವೃಷಭ: ಆಹಾರ ವ್ಯಾಪಾರಸ್ಥರಿಗೆ ಉತ್ತಮ ಲಾಭ ಬರಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ಮಿಥುನ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.

ಕಟಕ: ಸಂದಿಗ್ಧ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ. ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ.
ಸಿಂಹ: ದಾಂಪತ್ಯದಲ್ಲಿ ಸಮಸ್ಯೆ ಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.
ಕನ್ಯಾ: ಕಚೇರಿಯಲ್ಲಿ ಯಾವುದೇ ಅಡಚಣೆ ಬಾರದೆ ಎಲ್ಲವೂ ಸುಲಭವಾಗಿ ನೆರವೇರಲಿವೆ.

ತುಲಾ: ಇಲ್ಲಸಲ್ಲದ ಅಪವಾದ ನಿಮ್ಮ ಮೇಲೆ ಬರ ಬಹುದು. ಎಚ್ಚರಿಕೆ ಯಿಂದಿರಿ. ಸಂಗಾತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡಿ.
ವೃಶ್ಚಿಕ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಧನುಸ್ಸು: ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮ ದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.

ಮಕರ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಕುಂಭ: ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾ ಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮೀನ: ಅಸಹಾಯಕರಿಂದ ಸಹಾಯ ಮಾಡುವುದ ರಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.

DailyHoroscope, #Horoscope,#KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article