ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-08-2022)

Social Share

ನಿತ್ಯ ನೀತಿ: ನಿಜವಾದ ಶಿಕ್ಷಣ ಎಂದರೆ ಮಾನವೀಯತೆಯ ವಿಕಾಸ.

ಪಂಚಾಂಗ ಬುಧವಾರ 10-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಪೂರ್ವಾಷಾಢ /ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ: ಬೆ.06.07
ಸೂರ್ಯಾಸ್ತ: 06.43
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಪತ್ನಿಯ ಕುಟುಂಬ ಸದಸ್ಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ವೃಷಭ: ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ಸುಖದಲ್ಲಿ ಮೈ ಮರೆಯದಿರಿ.
ಮಿಥುನ: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಿ.

ಕಟಕ: ಬಂಧುಗಳೊಂದಿಗೆ ಅನಗತ್ಯ ವಿವಾದ ಬೇಡ. ಕುಲದೇವರನ್ನು ಪ್ರಾರ್ಥಿಸಿ.
ಸಿಂಹ: ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗದ ಕಡೆ ಗಮನ ನೀಡುವುದು ಒಳಿತು.
ಕನ್ಯಾ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.

ತುಲಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತೋರಿಸುವರು. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.
ವೃಶ್ಚಿಕ: ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದಿರಬೇಕು.
ಧನುಸ್ಸು: ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮ ವಾಗಿರುತ್ತದೆ. ತಲೆ ಅಥವಾ ಬೆನ್ನುನೋವು ಕಾಡಲಿದೆ.

ಮಕರ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ.
ಕುಂಭ: ಅವಿವಾಹಿತರಾಗಿದ್ದರೆ ಮದುವೆ ವಿಷಯ ನಿಮ್ಮ ಮುಂದೆ ಪ್ರಸ್ತಾಪವಾಗಲಿದೆ.
ಮೀನ: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

Articles You Might Like

Share This Article