ನಿತ್ಯ ನೀತಿ: ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ, ಆತ್ಮ ಅದಕ್ಕಿಂತ ಬಲಯುತವಾದುದು.
ಪಂಚಾಂಗ ಶನಿವಾರ 10-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು /ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಆರಿದ್ರಾ / ಮಳೆ ನಕ್ಷತ್ರ: ಜ್ಯೇಷ್ಠ
ಸೂರ್ಯೋದಯ : ಬೆ.06.31
ಸೂರ್ಯಾಸ್ತ : 05.54
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಲೇವಾದೇವಿ ವ್ಯವಹಾರವನ್ನು ಆಲೋಚನೆ ಮಾಡಿ ಮುಂದುವರೆಸಿ. ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅಧಿಕ ಲಾಭ ಗಳಿಸುವರು.
ವೃಷಭ: ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ. ತಂದೆ ಮಾತಿನಂತೆ ನಡೆಯುವುದು ಶ್ರೇಯಸ್ಕರ.
ಮಿಥುನ: ಉದ್ಯೋಗದ ಅನಿವಾರ್ಯತೆ ಬಿಟ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕಟಕ: ಜನರನ್ನು ಆಕರ್ಷಿ ಸುವ ಕಲೆ ಜತೆಗೆ ತಂತ್ರಗಾರಿಕೆ ಬಳಸಿ ಕೊಳ್ಳುವುದರಿಂದ ಲಾಭ ಗಳಿಸುವಿರಿ.
ಸಿಂಹ: ಆರ್ಥಿಕ ಲಾಭ ಪಡೆಯುವಿರಿ. ಕೆಲಸ-ಕಾರ್ಯ ಗಳು ಸುಗಮವಾಗಿ ಸಾಗಲಿವೆ.
ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಶತ್ರುಗಳ ಸ್ಪರ್ಧಾತ್ಮಕ ಗುಣದಿಂದ ಆತಂಕಕ್ಕೆ ಒಳಗಾಗುವಿರಿ.
ತುಲಾ: ಎಷ್ಟೇ ಚಾಣಾಕ್ಷತನ ತೋರಿದರೂ ಮಾತು ಗಾರಿಕೆಯಲ್ಲಿ ಸೋಲು ಒಪ್ಪಿಕೊಳ್ಳಬೇಕಾಗುತ್ತದೆ.
ವೃಶ್ಚಿಕ: ಆದರ್ಶ ಹಾಗೂ ತತ್ವಗಳ ಜತೆಗೆ ಹಿರಿಯರ ಉತ್ತಮ ಅನುಭವ ಹಾಗೂ ಸಲಹೆ ಅಳವಡಿಸಿಕೊಳ್ಳಿ.
ಧನುಸ್ಸು: ಮಸಾಲೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು.
ಮಕರ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರು ವವರು ಹಂತ ಹಂತವಾಗಿ ಸುಧಾರಿಸಿಕೊಳ್ಳುವರು.
ಕುಂಭ: ಸಹೋದರನ ಆರೋಗ್ಯದಲ್ಲಿ ಸುಧಾರಣೆ ಯಾಗಲಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.
ಮೀನ: ಹಣಕಾಸಿನ ಮುನ್ನೆಚ್ಚರಿಕೆ ಅಗತ್ಯ. ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ.
DailyHoroscope,#Horosc ope, #KannadaHoroscope, #TodayHoroscope, #ರಾಶಿಭವಿಷ್ಯ,