ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-01-2023)

Social Share

ನಿತ್ಯ ನೀತಿ : ಇರೋದು ಇರ್ತದೆ, ಹೋಗೋದು ಹೋಗ್ತದೆ. ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖ ಜೀವನದ ಮಂತ್ರ.

ಪಂಚಾಂಗ ಬುಧವಾರ 11-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮಘಾ ಯೋಗ: ಯುಷ್ಮಾನ್ / ಕರಣ: ಕೌಲವ

ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.10
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಆಹಾರ ವ್ಯಾಪಾರಸ್ಥರಿಗೆ ಉತ್ತಮ ಲಾಭ ಬರಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ವೃಷಭ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.
ಮಿಥುನ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.

ಕಟಕ: ಆರೋಗ್ಯದಲ್ಲಿ ಎಚ್ಚರಿಕೆ ತೀರ ಅಗತ್ಯ. ಬಂಧುಗಳೊಂದಿಗೆ ವೈಮನಸ್ಸು ಉಂಟಾದೀತು.
ಸಿಂಹ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.
ಕನ್ಯಾ: ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಪರಿಹಾರ ವಾಗಬಹುದು.

ತುಲಾ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.
ವೃಶ್ಚಿಕ: ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.
ಧನುಸ್ಸು: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.

ಮಕರ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಕುಂಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಮೀನ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article