ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(11-11-2022)

Social Share

ನಿತ್ಯ ನೀತಿ: ಎತ್ತರವಾದ ಜಾಗದಲ್ಲಿ ಕುಳಿತ ಮಾತ್ರಕ್ಕೆ ಕಾಗೆ, ಗರುಡ ಆಗುವುದಿಲ್ಲ. ದೊಡ್ಡ ದೊಡ್ಡ ಸ್ಥಾನದಲ್ಲಿ ಕುಳಿತ ಕೂಡಲೇ ವ್ಯಕ್ತಿ ದೊಡ್ಡವನಾಗುವುದಿಲ್ಲ. ಗುಣದಿಂದ ದೊಡ್ಡಸ್ತಿಕೆ ಬರಬೇಕೆ ಹೊರತು ಸ್ಥಾನದಿಂದಲ್ಲ.

ಪಂಚಾಂಗ ಶುಕ್ರವಾರ 11-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ / ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ: ಬೆ.06.17
ಸೂರ್ಯಾಸ್ತ: 05.51
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಪ್ರಾಮಾಣಿಕತೆಯಿಂದಾಗಿ ಮೇಲಧಿಕಾರಿಗಳಿಗೆ ನಿಮ್ಮ ಮೇಲೆ ಭರವಸೆ ಮೂಡಲಿದೆ.
ವೃಷಭ: ಹಂತ ಹಂತವಾಗಿ ಕೆಲವು ಅಪರೂಪದ ಸ್ನೇಹಿತನ ಭೇಟಿ ಸಂತೋತ ತರಲಿದೆ.
ಮಿಥುನ: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.

ಕಟಕ: ಮಕ್ಕಳಿಂದ ಆಗುವ ತೊಂದರೆ ತಪ್ಪಲಿದೆ. ಕೆಲವರಿಗೆ ನಿಮ್ಮ ಮೇಲಿದ್ದ ಸಂಶಯ ದೂರವಾಗಲಿದೆ.
ಸಿಂಹ: ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಈ ದಿನ ಅಷ್ಟು ಶುಭಕರವಾಗಿರುವುದಿಲ್ಲ.
ಕನ್ಯಾ: ಹಣದ ಕೊರತೆ ಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ತುಲಾ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.
ವೃಶ್ಚಿಕ: ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡದಿರಿ.
ಧನುಸ್ಸು: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು. ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

ಮಕರ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.
ಕುಂಭ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಮೀನ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.

Articles You Might Like

Share This Article