ನಿತ್ಯ ನೀತಿ : ನಿಮ್ಮೊಡನಾಡುವ ಜನರಿಗೆ ಅವಕಾಶ ಕೊಡಿ. ಒಡನಾಟವೆಂದರೆ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದಲ್ಲ. ಸ್ವತಂತ್ರವಾಗಿರಲು ಬಿಡುವುದು.
ಪಂಚಾಂಗ ಭಾನುವಾರ 11-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಪುನರ್ವಸು /ಮಳೆ ನಕ್ಷತ್ರ: ಜ್ಯೇಷ್ಠ
ಸೂರ್ಯೋದಯ : ಬೆ.06.31
ಸೂರ್ಯಾಸ್ತ : 05.54
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ ಮಾಡುವಿರಿ. ವಿವಿಧ ಮೂಲಗಳಿಂದ ಆದಾಯ ಬರಲಿದೆ.
ವೃಷಭ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ಮಿಥುನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.
ಕಟಕ: ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸಿ. ಅಧಿಕ ಧನವ್ಯಯವಾಗುವ ಸಂಭವವಿದೆ.
ಸಿಂಹ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದು ಒಳ್ಳೆಯದಲ್ಲ.
ಕನ್ಯಾ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ.
ತುಲಾ: ಕಾರ್ಯಕ್ರಮಗಳ ಒತ್ತಡ, ಧಾವಂತ ದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಲಿದೆ.
ವೃಶ್ಚಿಕ: ಬುದ್ಧಿಶಕ್ತಿಯಿಂದ ಕಾರ್ಯತಂತ್ರ ರೂಪಿಸುವಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡಿ.
ಧನುಸ್ಸು: ಮೇಲಧಿಕಾರಿಗಳು ನಿಮ್ಮ ಪ್ರತಿಭೆ ಗುರುತಿಸಿ ಬಹಿರಂಗವಾಗಿ ಗೌರವಿಸುವರು.
ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶಗಳು ಸಿಗಲಿವೆ.
ಮೀನ: ದೂರ ಪ್ರಯಾಣ ಅಥವಾ ಮನೆಯಿಂದ ದೂರ ಉಳಿಯುವುದು ಒಳ್ಳೆಯದಲ್ಲ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,