ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-01-2023)

Social Share

ನಿತ್ಯ ನೀತಿ : ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ. ಅನಿಸಿದ್ದನ್ನೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥವಿರುತ್ತಿರಲಿಲ್ಲ.

ಪಂಚಾಂಗ ಗುರುವಾರ 12-01-2023

ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಸೌಭಾಗ್ಯ / ಕರಣ: ಗರಜೆ

ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.11
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದ ರಿಂದ ವೈಯಕ್ತಿಕ ಜೀವನದಲ್ಲಿರುವ ದುಃಖ ನಿವಾರಣೆಯಾಗಲಿದೆ.
ವೃಷಭ: ಕಹಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಹಿರಿಯರ ಮಾತುಗಳನ್ನು ಗೌರವಿಸಿ.
ಮಿಥುನ: ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಿ. ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ.

ಕಟಕ: ಆರೋಗ್ಯದಲ್ಲಿ ಎಚ್ಚರಿಕೆ ತೀರ ಅಗತ್ಯ. ಬಂಧುಗಳೊಂದಿಗೆ ವೈಮನಸ್ಸು ಉಂಟಾದೀತು.
ಸಿಂಹ: ನಿಮ್ಮ ದಿನಚರಿ ಹಾಗೂ ನೀವು ಕೈಗೊಳ್ಳುವ ನಿರ್ಧಾರಗಳು ಮನೆಯ ವರಿಗೆ ತಿಳಿದಿರಲಿ.
ಕನ್ಯಾ: ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.

ತುಲಾ: ವ್ಯಾಪಾರದಲ್ಲಿ ಹಾನಿಯ ಸಾಧ್ಯತೆ ಇದೆ. ಅನವಶ್ಯಕ ಚಿಂತೆ ಕಾಡಲಿದೆ.
ವೃಶ್ಚಿಕ: ಭೂ ವ್ಯವಹಾರದಲ್ಲಿ ವಿವಾದ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಲಿದೆ.
ಧನುಸ್ಸು: ಅಧಿಕ ಧೈರ್ಯ, ನಂಬಿಕೆಗಳು ನಿಮ್ಮನ್ನು ಕಾಪಾಡಲಿವೆ. ವೃತ್ತಿಯಲ್ಲಿ ಅಧಿಕ ಶ್ರಮ.

ಮಕರ: ಪ್ರವಾಸ ಮಾಡಬೇಕಾದೀತು. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ.
ಕುಂಭ: ಕೌಟುಂಬಿಕವಾಗಿ ಕೆಲ ವಿಷಯಗಳಲ್ಲಿ ಗೊಂದಲ ಮೂಡಲಿದೆ. ದೂರ ಪ್ರಯಾಣ ಬೇಡ.
ಮೀನ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಾಲಗಾರರ ಕಿರಿಕಿರಿ ತಪ್ಪುವುದು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article