ನಿತ್ಯ ನೀತಿ : ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
ಪಂಚಾಂಗ ಭಾನುವಾರ 12-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಸ್ವಾತಿ / ಯೋಗ: ವ್ಯಾಘಾತ / ಕರಣ: ಕೌಲವ
ಸೂರ್ಯೋದಯ : ಬೆ.06.29
ಸೂರ್ಯಾಸ್ತ : 06.30
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.
ವೃಷಭ: ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ.
ಮಿಥುನ: ಕಾರ್ಯ ಸಾಮಥ್ರ್ಯವನ್ನು ಅರ್ಥ ಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಕಟಕ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಸಿಂಹ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕನ್ಯಾ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ತುಲಾ: ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ.
ವೃಶ್ಚಿಕ: ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಾಗಬಹುದು.
ಧನುಸ್ಸು: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ಮಕರ: ಬಂಧುಗಳಿಂದ ಸಮಸ್ಯೆ ಎದುರಾಗಲಿದೆ. ಹಿತಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮೀನ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,