ನಿತ್ಯ ನೀತಿ: ಒಳ್ಳೆಯ ಸ್ವಭಾವ ಹೊಂದಿದವರು ಗಣಿತದಲ್ಲಿರುವ ಶೂನ್ಯದಂತೆ. ಅವರು ಯಾರ ಜತೆ ಇದ್ದರೂ ಅವರ ಬೆಲೆ ಹೆಚ್ಚುತ್ತಲೇ ಇರುತ್ತದೆ.
ಪಂಚಾಂಗ ಬುಧವಾರ 12-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು /ಆಶ್ವಯುಜ ಮಾಸ /ಕೃಷ್ಣ ಪಕ್ಷ /ತಿಥಿ: ತೃತೀಯಾ / ನಕ್ಷತ್ರ: ಭರಣಿ /ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ: ಬೆ.06.10
ಸೂರ್ಯಾಸ್ತ: 06.03
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00
ರಾಶಿ ಭವಿಷ್ಯ
ಮೇಷ: ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯಲಿದೆ. ಜನಮನ್ನಣೆ ಗಳಿಸುವಿರಿ.
ಮಿಥುನ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ.
ಕಟಕ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಜಗಳ ಸಂಭವಿಸಲಿದೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಗೃಹೋಪ ಯೋಗಿ ವಸ್ತುಗಳ ಖರೀದಿಸುವಿರಿ.
ಕನ್ಯಾ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗದಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ತುಲಾ: ದೇಹಕ್ಕೆ ಅತಿಯಾದ ಶ್ರಮ ನೀಡದೆ ಕಾರ್ಯನಿರ್ವಹಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುವಿರಿ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸು ವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ಧನುಸ್ಸು: ಬ್ಯಾಂಕ್ ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನ ವ್ಯರ್ಥವಾಗಲಿದೆ.
ಮಕರ: ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸಿ. ಅಧಿಕ ಧನವ್ಯಯವಾಗುವ ಸಂಭವವಿದೆ.
ಕುಂಭ: ಪ್ರಯಾಣದಿಂದ ಆಯಾಸ. ಆರೋಗ್ಯದಲ್ಲಿ ಏರುಪೇರು. ಧನ ವ್ಯಯ.
ಮೀನ: ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ.