ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(12-11-2022)

Social Share

ನಿತ್ಯ ನೀತಿ: ಕನಸುಗಳು ಮತ್ತು ಗುರಿಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ.

ಪಂಚಾಂಗ ಶನಿವಾರ 12-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ: ಬೆ.06.17
ಸೂರ್ಯಾಸ್ತ: 05.51
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ: 6.00-7.30

ರಾಶಿ ಭವಿಷ್ಯ
ಮೇಷ
: ವ್ಯವಹಾರದಲ್ಲಿ ಸಣ್ಣಪುಟ್ಟ ನಷ್ಟ ಸಂಭವಿಸಲಿದೆ. ದುರಭ್ಯಾಸಗಳಿಂದ ದೂರವಿರಿ.
ವೃಷಭ: ಉದ್ಯೋಗ ಬದಲಾವಣೆಗೆ ಅಡೆತಡೆ ಉಂಟಾಗಲಿದೆ. ಅತೀ ಒತ್ತಡಕ್ಕೆ ಒಳಗಾಗದಿರಿ.
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ತಲೆದೋರಲಿವೆ.

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ.
ಸಿಂಹ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ.
ಕನ್ಯಾ: ಉದ್ಯಮಿಗಳು ಕೆಲಸಗಾರರೊಂದಿಗೆ ಯಾವುದೇ ಮನಸ್ತಾಪ ಮಾಡಿಕೊಳ್ಳದಿರಿ.

ತುಲಾ: ಕೆಲಸ-ಕಾರ್ಯ ಗಳಲ್ಲಿ ನಿಮಗಿದ್ದ ನಿರಾಸಕ್ತಿ ದೂರವಾಗಲಿದೆ.
ವೃಶ್ಚಿಕ: ಕಳೆದುಹೋದ ವಸ್ತು ಸಿಗುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಧನುಸ್ಸು: ಸುಗಂಧ ವಸ್ತುಗಳ ತಯಾರಿಕೆ ಮತ್ತು ಮಾರಾಟಗಾರರಿಗೆ ಹೆಚ್ಚು ಆದಾಯ ದೊರೆಯಲಿದೆ.

ಮಕರ: ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದದೆ. ಷೇರು ಬಂಡವಾಳ ಹೆಚ್ಚಾಗಲಿದೆ.
ಕುಂಭ: ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ನಿಮ್ಮ ಪ್ರಯತ್ನಕ್ಕೆ ಶುಭ ಫಲ ದೊರೆಯಲಿದೆ.
ಮೀನ: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

Articles You Might Like

Share This Article