ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(12-12-2022)

Social Share

ನಿತ್ಯ ನೀತಿ : ಜೀವನದಲ್ಲಿ ನೀನು ಎಂದೋ ಯಾರಿಗೋ ಮಾಡಿದ ಒಂದು ಉಪಕಾರ ಯಾವತ್ತೂ ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಯಾವುದೋ ರೂಪದಲ್ಲಿ ನಿನ್ನ ಬಳಿ ಬಂದೇ ಬರುತ್ತದೆ.

ಪಂಚಾಂಗ ಸೋಮವಾರ 12-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪುಷ್ಯ / ಮಳೆ ನಕ್ಷತ್ರ: ಜ್ಯೇಷ್ಠ

ಸೂರ್ಯೋದಯ : ಬೆ.06.32
ಸೂರ್ಯಾಸ್ತ : 05.55
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ವೃತ್ತಿಪರವಾಗಿ ನಡೆಯುವ ಎಲ್ಲ ವಿಷಯ ಗಳನ್ನೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.
ವೃಷಭ: ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟ ದಿಂದಾಗಿ ಉನ್ನತ ಸ್ಥಾನಮಾನ ಪಡೆಯುವಿರಿ.
ಮಿಥುನ: ಸಿಟ್ಟು ಅಥವಾ ಯೋಚನಾ ರಹಿತ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗಲಿವೆ.

ಕಟಕ: ಅಣ್ಣನ ಮನ ಸೆಳೆಯುವಲ್ಲಿ ಯಶಸ್ವಿ ಯಾಗುವಿರಿ. ಸಗಟು ವ್ಯಾಪಾರಿಗಳಿಗೆ ಸಣ್ಣ ಸಮಸ್ಯೆ ಎದುರಾಗಬಹುದು.
ಸಿಂಹ: ಆಹಾರದ ಪದ್ಧತಿ ನಿಯಂತ್ರಿಸಿಕೊಂಡು ರಕ್ತ ದೊತ್ತಡ ಸ್ಥಿತಿ ಸಮ ತೋಲನಕ್ಕೆ ಬರುವಂತೆ ಮಾಡಿಕೊಳ್ಳಿ.
ಕನ್ಯಾ: ಜವಾಬ್ದಾರಿಗಳತ್ತ ಹೆಚ್ಚಿನ ಗಮನ ಹರಿಸಿ. ಹೆಚ್ಚಿನ ಸಮಯವನ್ನು ಮನೆ ಸದಸ್ಯರೊಂದಿಗೆ ಕಳೆಯಿರಿ.

ತುಲಾ: ಸಂಶೋಧಕರಿಗೆ, ಕ್ರಿಯಾಶೀಲರಿಗೆ ಪ್ರಶಸ್ತ ದಿನ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.
ವೃಶ್ಚಿಕ: ವ್ಯವಹಾರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡದಿರುವುದು ಒಳಿತು.
ಧನುಸ್ಸು: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಮತ್ತು ಆತಂಕಕಾರಿ ವಿಷಯಗಳು ಎದುರಾಗಲಿವೆ.

ಮಕರ: ಗೆಳೆಯರು, ಸಂಬಂಧಿಕರ ನಡುವೆ ವೈಮನಸ್ಸು ಉಂಟಾಗುವ ಸಾಧ್ಯತೆಗಳಿವೆ.
ಕುಂಭ: ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ಅಧಿಕ ಲಾಭ ಸಿಗಲಿದೆ.
ಮೀನ: ಜವಾಬ್ದಾರಿಯ ಕೆಲಸ-ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article