ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-01-2023)

Social Share

ನಿತ್ಯ ನೀತಿ : ಸಂಸ್ಕøತಿಯು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿದೆಯೇ ಹೊರತು ನಮ್ಮನ್ನು ಅನ್ಯೋನ್ಯ ದೂರ ಮಾಡುವುದಕ್ಕಲ್ಲ. ಅದು ಸೋದರ ಭಾವನೆ ಬೆಳೆಸಿ ಸಂಘಟಿಸುವುದಕ್ಕಾಗಿಯೇ ಹೊರತು ಉಚ್ಚನೀಚ ಭಾವನೆ ಬಿತ್ತಿ ಜನತೆಯನ್ನು ವಿಂಗಡಿಸುವುದಕ್ಕಲ್ಲ.

ಪಂಚಾಂಗ ಶುಕ್ರವಾರ 13-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಶೋಭನ / ಕರಣ: ವಿಷ್ಟಿ

ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.11
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಮುಖಭಂಗವಾಗುವಂಥ ಮಾತುಗಳ ಬಳಕೆ ಮಾಡದಿರುವುದು ಬಹಳ ಒಳಿತು.
ವೃಷಭ: ಹಣಕಾಸಿನ ಸಂಸ್ಥೆಯವರಿಗೆ ಆಧಿಕ ಒತ್ತಡ. ಸ್ತ್ರೀಯರು ಕಚೇರಿಯಲ್ಲಿ ಉತ್ತಮ ಸಮಯ ಕಳೆಯುವಿರಿ.
ಮಿಥುನ: ಓದಿನಲ್ಲಿ ಏಕಾಗ್ರತೆ ವಹಿಸಿ. ಕಚೇರಿಯಲ್ಲಿ ಸಮಾಧಾನ ದಿಂದ ಕಾರ್ಯನಿರ್ವಹಿಸಿ.

ಕಟಕ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.
ಸಿಂಹ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.
ಕನ್ಯಾ: ಗೌರವ-ಸನ್ಮಾನ ಸಮಾರಂಭ ಗಳಲ್ಲಿ ಪಾಲ್ಗೊಳ್ಳುವಿರಿ.

ತುಲಾ: ಸಗಟು ವ್ಯಾಪಾರಿಗೆ ಹೆಚ್ಚು ನಷ್ಟ ಉಂಟಾಗುವ ಸಂಭವವಿದೆ.
ವೃಶ್ಚಿಕ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಅಧಿಕಾರಿ ವರ್ಗಕ್ಕೆ ಉತ್ತಮ ದಿನ.
ಧನುಸ್ಸು: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.

ಮಕರ: ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಯಾವುದೇ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ.
ಕುಂಭ: ದೂರ ಪ್ರಯಾಣ ಮಾಡುವಿರಿ. ಸಹೋದರರೊಂದಿಗೆ ವಾದ-ವಿವಾದಕ್ಕಿಳಿಯದಿರಿ.
ಮೀನ: ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article