ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-08-2022)

Social Share

ನಿತ್ಯ ನೀತಿ: ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ.

ಪಂಚಾಂಗ ಶನಿವಾರ 13-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ /ನಕ್ಷತ್ರ: ಶತಭಿಷಾ /ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ: ಬೆ.06.07
ಸೂರ್ಯಾಸ್ತ: 06.42
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ: 6.00-7.30

ರಾಶಿ ಭವಿಷ್ಯ
ಮೇಷ
: ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಉತ್ತಮವಾಗಿರಲಿದೆ.
ವೃಷಭ: ಬಂಧುಗಳೊಡನೆ ಅನಗತ್ಯ ವಿವಾದ ಬೇಡ. ಖರ್ಚುವೆಚ್ಚಗಳು ಹೆಚ್ಚಾಗುತ್ತವೆ.
ಮಿಥುನ: ಮಗನಿಗೆ ಮದುವೆ ಪ್ರಸ್ತಾಪ ಬರಲಿದ್ದು, ಸಂಬಂಧ ಯೋಗ್ಯವಾಗಿದ್ದಲ್ಲಿ ಮುಂದುವರೆಸಿ.

ಕಟಕ: ಕಷ್ಟಪಟ್ಟು ಆರಂಭಿಸಿದ ವ್ಯವಹಾರದ ಕಡೆ ವಿಶೇಷ ಗಮನ ಕೊಡಿ. ಕುಲದೇವರನ್ನು ಪ್ರಾರ್ಥಿಸಿ.
ಸಿಂಹ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಕನ್ಯಾ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.

ತುಲಾ: ದಂಪತಿಗೆ ಸಂತಾನ ಭಾಗ್ಯದ ಸೂಚನೆ ಕಂಡುಬರಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ಭಯ ಕಾಡಲಿದೆ.
ವೃಶ್ಚಿಕ: ವೈಯಕ್ತಿಕ, ದೈಹಿಕ, ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಒಳಿತು.
ಧನುಸ್ಸು: ಇತರರಿಗೆ ಮುಜುಗರ ಉಂಟುಮಾಡ ದಿರಿ. ಕುಟುಂಬದ ಅವಶ್ಯಕತೆಗಳಿಗೆ ಗಮನ ಕೊಡಿ.

ಮಕರ: ಮುಂದೆ ಯಾವಾಗಲೋ ಹಣ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡದಿರಿ.
ಕುಂಭ: ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ವಾಗಿರುವುದಿಲ್ಲ. ದೇವಸ್ಥಾನಕ್ಕೆ ಭೇಟಿ ಕೊಡಿ.
ಮೀನ: ಹಿರಿಯರ ಆರೋಗ್ಯದ ಬಗ್ಗೆ ತುಸು ಕಾಳಜಿ ವಹಿಸಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

Articles You Might Like

Share This Article