ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-10-2022)

Social Share

ನಿತ್ಯ ನೀತಿ: ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ, ಇದ್ದುದ್ದರಲ್ಲೇ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ.

ಪಂಚಾಂಗ ಗುರುವಾರ 13-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಕೃತ್ತಿಕಾ / ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ: ಬೆ.06.10
ಸೂರ್ಯಾಸ್ತ: 06.02
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸುವುದು ಒಳಿತು.
ವೃಷಭ: ವೈದ್ಯರು ನೀಡುವ ಸಲಹೆಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ.
ಮಿಥುನ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವುದು ಸೂಕ್ತ.

ಕಟಕ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಸಿಂಹ: ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಲಾಭ ದೊರೆಯಲಿದೆ.
ಕನ್ಯಾ: ಸ್ವಂತ ಉದ್ಯಮ ದಲ್ಲಿರುವವರು ಕಾರ್ಯ ಕ್ಷೇತ್ರದಲ್ಲಿ ಲಾಭ ಗಳಿಸುವರು.

ತುಲಾ: ಇಡೀ ದಿನ ಉತ್ಸಾಹ ದಿಂದಿರುವಿರಿ. ವೈವಾಹಿಕ ಜೀವನದಲ್ಲಿ ಹೊಸತನ ಮೂಡಲಿದೆ. ಆರ್ಥಿಕ ಲಾಭ ಪಡೆಯುವಿರಿ.
ವೃಶ್ಚಿಕ: ನೀವು ಮಾಡುವ ಕೆಲಸ-ಕಾರ್ಯಗಳಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಿ.
ಧನುಸ್ಸು: ವ್ಯವಹಾರದಲ್ಲಿ ಲಾಭ-ನಷ್ಟಗಳನ್ನು ಸರಿದೂಗಿಸಿಕೊಂಡು ಹೋಗುವುದು ಒಳಿತು.

ಮಕರ: ಸ್ಥಗಿತಗೊಂಡ ಕೆಲಸ ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡುವಿರಿ.
ಕುಂಭ: ಮೇಲಧಿಕಾರಿಗಳ ಮನಸ್ಥಿತಿ ಅರ್ಥ ಮಾಡಿ ಕೊಂಡು ನಿಮ್ಮ ಬೇಡಿಕೆ ಮುಂದಿಡುವುದು ಒಳಿತು.
ಮೀನ: ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

Articles You Might Like

Share This Article