ನಿತ್ಯ ನೀತಿ : ನೀರು ಕೆಸರಾದರೆ ಸ್ವಲ್ಪ ಹೊತ್ತು ಅದರ ಪಾಡಿಗೆ ಅದನ್ನು ಬಿಟ್ಟರೆ ತಿಳಿಯಾಗುತ್ತದೆ. ಬಿಸಿ ನೀರು ಸ್ವಲ್ಪ ಹೊತ್ತು ಬಿಟ್ಟರೆ ಅದು ಸಹ ತನಗೆ ತಾನೇ ತಣ್ಣಗಾಗುತ್ತದೆ. ಸ್ವಲ್ಪ ಹೊತ್ತು ಎಲ್ಲವನ್ನೂ ಹಾಗೆ ಬಿಟ್ಟರೆ ಎಲ್ಲವೂ ನಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾಗುತ್ತವೆ. ಕಾಯುವ ತಾಳ್ಮೆ, ಸಹನೆ ನಮ್ಮಲ್ಲಿ ಇರಬೇಕು ಅಷ್ಟೇ. ಅವಸರ ಪಟ್ಟರೆ ಎಲ್ಲವೂ ಹಾಳು.
ಪಂಚಾಂಗ ಶನಿವಾರ 14-01-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಹಸ್ತ / ಯೋಗ: ಅತಿಗಂಡ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.12
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯಗಳಲ್ಲಿ ವಿಫಲವಾಗಲಿದೆ. ಪರರ ವಿಷಯದಲ್ಲಿ ಜಾಗ್ರತೆ ಇರಲಿ.
ವೃಷಭ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ಮಿಥುನ: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗ ದಲ್ಲಿ ಲಾಭ ಸಿಗಲಿದೆ.
ಕಟಕ: ಕುಲದೇವರನ್ನು ಪ್ರಾರ್ಥಿಸಿ. ಅನಿರೀಕ್ಷಿತ ವರ್ಗಾವಣೆ ಯೋಗವಿದೆ.
ಸಿಂಹ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಕನ್ಯಾ: ಹೊಟೇಲ್ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದಲ್ಲಿ ಏರುಪೇರಾಗಲಿದೆ. ಲಾಭದಾಯಕವಾದ ದಿನ.
ತುಲಾ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ವೃಶ್ಚಿಕ: ವ್ಯಾಪಾರದಲ್ಲಿ ಮುನ್ನುಗ್ಗಿ ಕೆಲಸ ಮಾಡುವುದರಿಂದ ಕನಸು ನನಸಾಗಲಿದೆ.
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.
ಮಕರ: ದೂರ ಪ್ರಯಾಣ ವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಮೀನ: ಕುಟುಂಬದಲ್ಲಿ ತೊಂದರೆಗಳು ಎದುರಾಗ ಬಹುದು. ತಾಳ್ಮೆಯಿಂದ ವರ್ತಿಸಿ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,