ನಿತ್ಯ ನೀತಿ: ಪ್ರಕೃತಿ ಮಾನವರಿಗೆ ತಿಳಿಸಿದ ಅತೀ ಸುಂದರವಾದ ಸಂದೇಶ ನೀವು ಮಾಲೀಕರಲ್ಲ, ನೀವು ಈ ಜಗತ್ತಿಗೆ ಬಂದ ಅತಿಥಿಗಳು ಮಾತ್ರ…
ಗುರುವಾರ ಪಂಚಾಂಗ
14-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಪುನರ್ವಸು
*ಸೂರ್ಯೋದಯ: ಬೆ.06.01
*ಸೂರ್ಯಾಸ್ತ : 06.50
*ರಾಹುಕಾಲ ; 1.30-3.00
*ಯಮಗಂಡ ಕಾಲ ; 6.00-7.30
*ಗುಳಿಕ ಕಾಲ ; 9.00-10.30
#ರಾಶಿ ಭವಿಷ್ಯ
ಮೇಷ: ಪ್ರತಿಯೊಂದು ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ.
ವೃಷಭ: ಕುಟುಂಬ ಜೀವನದಲ್ಲಿ ಖುಷಿ ಇರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ.
ಮಿಥುನ: ವ್ಯಾಯಾಮ- ಧ್ಯಾನ ಮಾಡುವುದರಿಂದ ಸಂತೋಷ ಸಿಗಲಿದೆ.
ಕಟಕ: ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ಸುಖದಲ್ಲಿ ಮೈ ಮರೆಯದಿರಿ.
ಸಿಂಹ: ಉದ್ಯೋಗಸ್ಥರು ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆಯಬಹುದು.
ಕನ್ಯಾ: ಕೆಲವು ಸಂದರ್ಭಗಳಲ್ಲಿ ನಿರಾಸೆ ಅನುಭವಿಸುವಿರಿ.ವ್ಯಾಪಾರಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ಆರ್ಥಿಕ ಸಮಸ್ಯೆಗಳಿಂದಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ.
ವೃಶ್ಚಿಕ: ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ಪ್ರವಾಸ ಕೈಗೊಳ್ಳುವಿರಿ.
ಧನುಸ್ಸು: ಸ್ವಲ್ಪ ನಷ್ಟ ಅನುಭವಿಸಿದರೂ ಕೊನೆಯಲ್ಲಿ ಲಾಭ ಸಿಗುವ ಸಾಧ್ಯತೆಗಳಿವೆ.
ಮಕರ: ವ್ಯಾಪಾರಿಗಳು ಲಾಭ ಗಳಿಸಲು ಉತ್ತಮ ಅವಕಾಶಗಳಿವೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.
ಕುಂಭ: ಹಣದ ವಿಷಯಕ್ಕೆ ಮಾನಸಿಕ ಒತ್ತಡ ಹೆಚ್ಚಾಗು ತ್ತದೆ. ಆದ್ದರಿಂದ ಸಾಲ ಕೊಡುವ ಮುನ್ನ ಯೋಚಿಸಿ.
ಮೀನ: ಅತ್ತೆ ಅಥವಾ ತಾಯಿ ಕಡೆಯಿಂದ ಒಡವೆ ಬರುವ ಸಾಧ್ಯತೆಗಳಿವೆ. ಯಶಸ್ಸು ಪಡೆಯುವಿರಿ.