ನಿತ್ಯ ನೀತಿ ; ಜೀವನದಲ್ಲಿ ಸೋಲು ಕಂಡ ವ್ಯಕ್ತಿಗಳ ಜತೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಏಕೆಂದರೆ ಅವರ ಬಳಿ ಅಹಂಕಾರವಿರುವುದಿಲ್ಲ, ಅನುಭವವಿರುತ್ತದೆ.
ಪಂಚಾಂಗ ಬುಧವಾರ 14-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು /ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಅಶ್ವಿನಿ / ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.22
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00
ರಾಶಿ ಭವಿಷ್ಯ
ಮೇಷ: ಐಷಾರಾಮಿ ಜೀವನ ನಿರ್ವಹಣೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
ವೃಷಭ: ವ್ಯವಹಾರದಲ್ಲಿ ಸಣ್ಣಪುಟ್ಟ ನಷ್ಟ ಸಂಭವಿಸಲಿದೆ. ದುರಭ್ಯಾಸಗಳಿಂದ ದೂರವಿರಿ.
ಮಿಥುನ: ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ನಿಮ್ಮ ಪ್ರಯತ್ನಕ್ಕೆ ಶುಭ ಫಲ ದೊರೆಯಲಿದೆ.
ಕಟಕ: ಉದ್ಯಮಿಗಳು ಕೆಲಸಗಾರರೊಂದಿಗೆ ಯಾವುದೇ ಮನಸ್ತಾಪ ಮಾಡಿಕೊಳ್ಳದಿರಿ.
ಸಿಂಹ: ಕೆಲಸಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಂದ ತುರ್ತು ಸಂದೇಶ ಬರಲಿದೆ.
ಕನ್ಯಾ: ನಿಮ್ಮ ಹಾಸ್ಯದಿಂದ ಬೇರೆಯವರಿಗೆ ನೋವುಂಟಾಗದಂತೆ ನೋಡಿಕೊಳ್ಳಿ.
ತುಲಾ: ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾಭ್ಯಾಸದಲ್ಲಿ ಪೈಪೋಟಿ ಇರಲಿದೆ.
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ.
ಧನುಸ್ಸು: ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಮತ್ತು ಏಕಾಗ್ರತೆ ಕಾಯ್ದುಕೊಳ್ಳಿ.
ಮಕರ: ವ್ಯವಹಾರಗಳು ಸಮಾಧಾನಕರ ಆದಾಯ ತರಲಿವೆ. ಧಾರ್ಮಿಕ ಕಾರ್ಯ ಮಾಡುವಿರಿ.
ಕುಂಭ: ಕೆಲಸಗಳು ಸರಾಗವಾಗಿ ನಡೆದು ಮನಸ್ಸು ನಿರಾಳವಾಗಲಿದೆ. ಉತ್ತಮ ದಿನ.
ಮೀನ: ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗಬಹುದು.