ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2022)

Social Share

ನಿತ್ಯ ನೀತಿ : ಅವರಿಂದ, ಇವರಿಂದ ಮೂರ್ಖನಾದೆ ಎಂದು ವೈಥ್ಯ ಪಡಬೇಡ. ಸತ್ಯದ ಅರಿವಾಯಿತು ಅಂದುಕೊಂಡು ಸಂತೋಷವಾಗಿರು. ಕೆಲವು ಸತ್ಯದ ಮುಖಗಳು ಬೆಳಕಿಗೆ ಬರುವುದೇ ಅನುಭವದ ಮೇಲೆ.

ಪಂಚಾಂಗ ಶುಕ್ರವಾರ 14-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ರೋಹಿಣಿ / ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ: ಬೆ.06.10
ಸೂರ್ಯಾಸ್ತ: 06.01
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಹೊಸ ಮನೆ ನಿರ್ಮಾಣಕ್ಕಾಗಿ ತಯಾರಿ ಮಾಡಿ ಕೊಳ್ಳುವಿರಿ. ನಿರೀಕ್ಷಿತ ಮೂಲಗಳಿಂದ ಆದಾಯ ಬರಲಿದೆ.
ವೃಷಭ: ಷರತ್ತುಗಳಿಗೆ ಒಪ್ಪಿಕೊಳ್ಳುವಂತಹ ಯಾವುದೇ ರೀತಿಯ ವ್ಯವಹಾರಕ್ಕೂ ಕೈ ಹಾಕದಿರಿ.
ಮಿಥುನ: ಹಂತ ಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ಕಟಕ: ಮುಖ್ಯ ಕೆಲಸವೊಂದಕ್ಕೆ ಸಲಹೆ ಪಡೆಯಲು ಗಣ್ಯ ವ್ಯಕ್ತಿಯನ್ನು ಸಂಪರ್ಕಿಸುವಿರಿ.
ಸಿಂಹ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುವಿರಿ.
ಕನ್ಯಾ: ಸ್ವಂತಿಕೆ ಬಿಟ್ಟು ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ.

ತುಲಾ: ಇಡೀ ದಿನವನ್ನು ಬೇಜಾರಿನಲ್ಲಿ ಕಳೆಯ ಬೇಕಾಗುತ್ತದೆ. ಮನಸ್ಸಿಗೆ ಸಮಾಧಾನ ಇರುವುದಿಲ್ಲ.
ವೃಶ್ಚಿಕ: ಪೂರ್ವ ನಿಯೋಜಿತ ಕೆಲಸಗಳು ಉತ್ತಮ ವಾಗಿ ನಡೆಯುವುದರಿಂದ ನೆಮ್ಮದಿ ಸಿಗಲಿದೆ.
ಧನುಸ್ಸು: ಹಿರಿಯರ ಮಾತಿನಂತೆ ನಡೆದುಕೊಳ್ಳುವುದರಿಂದ ಶುಭ ಫಲ ಸಿಗಲಿದೆ.

ಮಕರ: ಸ್ನೇಹಿತನ ಮೇಲಿದ್ದ ಸಂಶಯ ದೂರವಾಗ ಲಿದೆ. ತಂದೆ-ತಾಯಿ ಆರೋಗ್ಯದ ಬಗ್ಗೆ ಗಮನ ಹರಿಸಿ.
ಕುಂಭ: ಉದಾರ ಮನೋಭಾವದಿಂದಾಗಿ ನೆರೆಹೊರೆಯವರ ಗಮನ ಸೆಳೆಯುವಿರಿ.
ಮೀನ: ಕೆಲಸದಲ್ಲಿನ ಶ್ರದ್ಧೆ-ಕಾಳಜಿಯಿಂದ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

Articles You Might Like

Share This Article